ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೊಚ್ ಬೆಹಾರ್ ಜಿಲ್ಲೆಯ ಮೆಖ್ಲಿಗಂಜ್ ಪ್ರದೇಶದ ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಶಂಕಿತ ಗೋವು ಕಳ್ಳಸಾಗಣೆದಾರರೊಂದಿಗೆ ಪೊಲೀಸರ ಘರ್ಷಣೆ ನಡೆದಿದ್ದು, ಕನಿಷ್ಠ 17 ಪೊಲೀಸರು ಗಾಯಗೊಂಡಿದ್ದಾರೆ.
ಈ ಸಂಬಂಧ ಇಬ್ಬರು ಪುರುಷರು ಮತ್ತು ನಾಲ್ವರು ಮಹಿಳೆಯರನ್ನು ಪೊಲೀಸರು
ಬಂಧಿಸಿದ್ದು, 34 ಹಸುಗಳನ್ನು ರಕ್ಷಿಸಲಾಗಿದೆ.
ಶನಿವಾರ ಮಾಲ್ಡಾ ಜಿಲ್ಲೆಯಲ್ಲಿ ಇಂಥದ್ದೇ ಘಟನೆ ನಡೆದಿದ್ದು, ಗಡಿ ಭದ್ರತಾ ಪಡೆ ಸಿಬ್ಬಂದಿ ಮತ್ತು ಶಂಕಿತ ಗೋವು ಸಾಗಣೆದಾರರ ನಡುವೆ ಘರ್ಷಣೆ ನಡೆದಿದೆ. ಈ ಘರ್ಷಣೆಯಲ್ಲಿ ಬಾಂಗ್ಲಾ ಪ್ರಜೆಯೊಬ್ಬರು ಮೃತಪಟ್ಟಿದ್ದಾರೆ.
ಕೊಚ್ ಬೆಹಾರ್‌ನಲ್ಲಿ ಗಡಿಯುದ್ದಕ್ಕೂ ಗೋವುಗಳ ಕಳ್ಳಸಾಗಣೆ ಬಗ್ಗೆ ಮಾಹಿತಿ ದೊರಕಿದ್ದು, ಪೊಲೀಸರು ಉಚ್ಚಲ್ಪುಕುರಿ ಗ್ರಾಮ ತಲುಪಿದ್ದಾರೆ. ಆಗ ಗುಂಪೊಂದು ಏಕಾಏಕಿ ಪೊಲೀಸರ ಮೇಲೆ ದಾಳಿ ಮಾಡಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಗಾಯಗೊಂಡ 17 ಪೊಲೀಸರಲ್ಲಿ ಎಂಟು ಮಂದಿಯನ್ನು ಸಮೀಪದ ಮೆಖ್ಲಿಗಂಜ್ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.ದಾಳಿಯ ನಡುವೆಯೂ ಶೆಡ್‌ಗೆ ತೆರಳಿ ಪೊಲೀಸರು 34 ಹಸುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.