ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿದ್ಯುನ್ಮಾನ ಮತಯಂತ್ರ ತಿರುಚಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಮೂರು ವಾರಗಳ ಕಾಲ ಸಂಪೂರ್ಣ ಲಾಕ್‌ಡೌನ್ ಜಾರಿ…
ಗಾಬರಿಯಾಗಬೇಡಿ, ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಹರಿಯಬಿಟ್ಟ ಕಿಡಿಗೇಡಿಗೆ ಪೊಲೀಸರು ಠಾಣೆಗೆ ಕರೆತಂದು ‘ಪೊಲೀಸ್ ಸನ್ಮಾನ’ ಮಾಡಿದ್ದಾರೆ. ಈ ಘಟನೆ ಕೇರಳದ ಮಲಪ್ಪುರಂನಲ್ಲಿ ನಡೆದಿದೆ.
ಮಲಪ್ಪುರಂ ಮೂಲದ ಎಂ.ವಿ. ಶರಪುದ್ದೀನ್ ಎಂಬಾತ ಬಂಧಿತ ಆರೋಪಿ. ಈತ ಕೋವಿಡ್ ಅವಧಿಯಲ್ಲಿನ ಲಾಕ್‌ಡೌನ್ ಸುದ್ದಿಯೊಂದರ ಸ್ಕ್ರೀನ್‌ಶಾಟ್ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ. ಇದು ಕೊಚ್ಚಿಯ ಸೈಬರ್ ಡೋಮ್ ತಂಡದ ಗಮನಕ್ಕೆ ಬಂದಿದ್ದು, ತಕ್ಷಣ ಎಚ್ಚೆತ್ತ ಅಧಿಕಾರಿಗಳು ಆತನಿಗೆ ಬಲೆ ಬೀಸಿ ಬಂಧಿಸಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭ ಸಾಮಾಜಿಕ ಮಾಧ್ಯಮಗಳಲ್ಲಿ ಹರಡುವ ಸುಳ್ಳು ಸುದ್ದಿಗಳ ಮೇಲೆ ಪೊಲೀಸರ ನಿಗಾ ಹೆಚ್ಚಿದ್ದು, ಪ್ರತೀ ಚಲನವಲನಗಳನ್ನೂ ಹದ್ದಿನಕಣ್ಣಿರಿಸಿ ಗಮನಿಸಲಾಗುತ್ತಿದೆ.