ಮಾನವ ಮುಖ, ನೋಡಲು ಕ್ಯೂಟ್, ಅಷ್ಟೇ ಖತರ್‌ನಾಕ್… ಆಂಧ್ರ ಮೀನುಗಾರರಿಗೆ ಹಾಯ್ ಎಂದ ಪಫ್ಫರ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಾನವ ಮುಖವನ್ನು ಒಂದಿಷ್ಟು ಹೋಲುವ, ನೋಡಲು ಕ್ಯೂಟ್ ಕ್ಯೂಟ್ ಆಗಿರುವ, ಅಷ್ಟೇ ಅಪಾಯಕಾರಿಯೂ ಆಗಿರುವ ಅತ್ಯಂತ ಅಪರೂಪದ ಪಫ್ಫರ್ ಫಿಶ್ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಸಮುದ್ರದಲ್ಲಿ ಮೀನುಗಾರರ ಬಲೆಗೆ ಬಿದ್ದಿದೆ.

ಸಮುದ್ರದ ಆಳದಲ್ಲಷ್ಟೇ ಕಾಣಸಿಗುವ ಈ ಮೀನು ವಿಷಕಕಾರಿಯಾಗಿದ್ದು, ಇದರ ವಿಷವು ಸೈನೈಡ್‌ಗಿಂತ ಸಾವಿರ ಪಟ್ಟು ತೀವ್ರವಿದೆ. ಶತ್ರುಗಳು ದಾಳಿ ಮಾಡುವ ಸಂದರ್ಭ ದೇಹವನ್ನು ಬಲೂನ್‌ನಂತೆ ಹಿಗ್ಗಿಸಿಕೊಳ್ಳುವುದು ಇದರ ವಿಶೇಷತೆ.

ಜಪಾನ್‌ನಲ್ಲಿ ನೆಚ್ಚಿನ ಖಾದ್ಯವಾಗಿ ಬಳಸುವ ಈ ಮೀನನ್ನು ತಿಂದು ಪ್ರತಿ ವರ್ಷ ನೂರಾರು ಜಪಾನಿಗರು ಸಾಯುತ್ತಾರೆ. ಹೀಗಾಗಿ ಅಲ್ಲಿ ಇದರ ಆಹಾರ ತಯಾರಿಸಲು ಪರವಾನಿಗೆ ಕೂಡಾ ಬೇಕಾಗಿದೆ. ತರಬೇತಿ ಪಡೆದ ಬಾಣಸಿಗರಿಗೆ ಮಾತ್ರ ಈ ಮೀನಿನ ಖಾದ್ಯ ತಯಾರಿಸಲು ಸಾಧ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!