ಪೊಲೀಸರ ಮೇಲೆ 100ನಾಯಿಗಳನ್ನು ಛೂ ಬಿಟ್ಟ ಡ್ರಗ್ಸ್‌ ದಂಧೆ ಕೋರರು: ಹಲವರಿಗೆ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಹೈದರಾಬಾದ್‌ನಲ್ಲಿ ಡ್ರಗ್ಸ್ ದಂಧೆ ಮುಂದುವರಿದಿದೆ. ಪೊಲೀಸರು ಎಷ್ಟೇ ಕಠಿಣ ಕ್ರಮ ನಡೆಸಿದರೂ ಡ್ರಗ್ಸ್ ದಂಧೆ ನಿಂತಿಲ್ಲ. ವಿದ್ಯಾವಂತರೇ ಮಾದಕ ದ್ರವ್ಯ ದಂಧೆಯಲ್ಲಿ ತೊಡಗಿರುವುದು ದುರಂತ. ಈ ಕಾನೂನು ಬಾಹಿರ ಚಟುವಟಿಕೆ ನಡೆಸಲು ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಆನ್‌ಲೈನ್‌ನಲ್ಲಿ ಡ್ರಗ್ಸ್ ದಂಧೆ ಬಗ್ಗೆ ನಿಖರ ಮಾಹಿತಿಯೊಂದಿಗೆ ಪೊಲೀಸರು ಗ್ಯಾಂಗ್‌ಗಳ ಮೇಲೆ ದಾಳಿ ಮಾಡಲು ಸಿದ್ದವಾಗಿದ್ರು.

ಈ ವೇಳೆ ಡ್ರಗ್ ಗ್ಯಾಂಗ್ ಒಂದಲ್ಲ ಎರಡಲ್ಲ ಸುಮಾರು 100 ನಾಯಿಗಳನ್ನು ಪೊಲೀಸರ ಮೇಲೆ ಛೂ ಬಿಟ್ಟಿದ್ದಾರೆ. ನಾಯಿಗಳ ದಾಳಿಯಿಂದಾಗಿ ಹಲವು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಡಾರ್ಕ್ ನೆಟ್ ವೆಬ್ ಮೂಲಕ ದಂಧೆಕೋರರು ಕಳ್ಳಸಾಗಣೆ ಮಾಡುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಇಬ್ಬರು ಪೂರೈಕೆದಾರರು ಹಾಗೂ ಆರು ಮಂದಿ ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಪ್ರಮುಖ ನಾಯಕ ನರೇಂದ್ರ ನಾಯ್ಯಾನನ್ನೂ ಪೊಲೀಸರು ಬಂಧಿಸಿ ಅವರಿಂದ 9 ಲಕ್ಷ ರೂಪಾಯಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!