Wednesday, October 5, 2022

Latest Posts

ಕ್ಯಾಸಿನೋ ಮೇಲೆ ಪೊಲೀಸರ ದಾಳಿ: ಕರ್ನಾಟಕದ KAS ಅಧಿಕಾರಿ ಸಹಿತ 7 ಮಂದಿ ಬಂಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ರಾಜಸ್ತಾನದ ಜೈಪುರದ ಫಾರ್ಮ್ ಹೌಸ್ ಒಂದರಲ್ಲಿ ಜೂಜಾಟ, ಅಶ್ಲೀಲ ಪಾರ್ಟಿ ನಡೆಯುತ್ತಿದ್ದ ಅಡ್ಡೆಗೆ ಸೈಬರ್ ಕ್ರೈಂ ಪೊಲೀಸರು ಏಕಾಏಕಿ ದಾಳಿ ನಡೆಸಿದ್ದಾರೆ. ಈ ದಾಳಿಯ ವೇಳೆಯಲ್ಲಿ ಕರ್ನಾಟಕದ ಕೆ ಎಎಸ್ ಅಧಿಕಾರಿ ಸಹಿತ 7 ಮಂದಿ ಬಂಧಿಸಲಾಗಿದೆ.

ರಾಜ್ಯದಿಂದ ಮಹಾರಾಷ್ಟ್ರಕ್ಕೆ ತೆರಳಿದ್ದ ಕೆ ಎಎಸ್ ಅಧಿಕಾರಿಗಳು ಸಹಿತ ಹಲವು ಅಧಿಕಾರಿಗಳು, ಜೂಜಾಟ, ಅಶ್ಲೀಲ ಪಾರ್ಟಿಯಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಪೊಲೀಸರು ನಡೆಸಿದಂತ ದಾಳಿಯಲ್ಲಿ ಸಿಕ್ಕಿಬಿದ್ದಿರೋದಾಗಿ ತಿಳಿದು ಬಂದಿದೆ.

ಬಂಧಿತರನ್ನು ಕೆ ಎಎಸ್ ಅಧಿಕಾರಿ ಶ್ರೀನಾಥ್, ಕೋಲಾರದ ಸೈಬರ್ ಕ್ರೈಂ ವಿಭಾಗದ ಇನ್ಸ್ ಪೆಕ್ಟರ್ ಅಂಜಿನಪ್ಪ, ಕೋಲಾರ ನಗರಸಭೆಯ ಸದಸ್ಯ ಸತೀಶ್, ಶಿಕ್ಷಕ ರಮೇಶ್, ಆರ್ ಟಿಓ ಇಲಾಖೆ ಸಿಬ್ಬಂದಿ ಶಬರೀಶ್, ವ್ಯಾಪಾರಿ ಸುಧಾಕರ್ ಸೇರಿದಂತೆ ಒಟ್ಟು 7 ಜನರನ್ನು ಬಂಧಿಸಲಾಗಿದೆ. ಈ ಮೂಲಕ ಕ್ಯಾಸಿನೋ ರೇಡ್ ನಲ್ಲಿ ರಾಜ್ಯದ 7 ಮಂದಿ ಸರ್ಕಾರಿ ಅಧಿಕಾರಿಗಳು ಸಿಕ್ಕಿಬಿದ್ದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!