ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೆತ್ತ ತಾಯಿಯನ್ನೇ ಕೊಲೆಗೈದು ಶವವನ್ನು ಸೂಟ್‌ಕೇಸ್ ನಲ್ಲಿ ಪೊಲೀಸ್ ಠಾಣೆಗೆ ತಂದ ಪ್ರಕರಣ ಸಂಬಂಧ ಆರೋಪಿ ಸೊನಾಲಿಯನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಆರೋಪಿ ಶಾಕಿಂಗ್ ಮಾಹಿತಿ ಬಿಚ್ಚಿಟ್ಟಿದ್ದಾಳೆ.
ವಿಚಾರಣೆ ವೇಳೆ ನನ್ನ ತಾಯಿಗೆ ಮುಕ್ತಿ ಕೊಡಿಸಿದ್ದೇನೆ ಎಂದು ಹೇಳಿದ್ದಾಳೆ. ನಿದ್ದೆ ಮಾತ್ರ ಕೊಟ್ಟು ಕೊಲೆ ಮಾಡಲು ತಾಯಿಯೇ ನನ್ನ ಬಳಿ ಹೇಳಿದ್ದರು ಹಾಗಾಗಿ ಹೀಗೆ ಮಾಡಿದೆ ಎಂದು ಸೊನಾಲಿ ಹೇಳಿಕೆ ಕೇಳಿ ಪೊಲೀಸರು ಶಾಕ್ ಆಗಿದ್ದಾರೆ.
ಏನಿದು ಪ್ರಕರಣ ?
ಸೊನಾಲಿಯ ಅತ್ತೆ ಹಾಗೂ ತಾಯಿ ನಡುವೆ ಜಗಳ ನಡೆಯುತ್ತಿತ್ತು, ಇದರಿಂದ ಬೇಸತ್ತ ಮಗಳು ಈ ಕೃತ್ಯ ಎಸಗಿದ್ದಾಳೆ. ತಾಯಿಗೆ 20 ನಿದ್ದೆ ಮಾತ್ರೆ ಹಾಕಿದ ಸೊನಾಲಿ ನಂತರ ವೇಲು ಬಿಗಿದು ತಾಯಿಯನ್ನು ಹತ್ಯೆ ಮಾಡಿದ್ದಾಳೆ. ನಂತರ ಯಾರಿಗೂ ಗೊತ್ತಾಗದೇ ತಾಯಿಯ ಶವವನ್ನು ಸೂಟ್ ಕೇಸ್ ನಲ್ಲಿ ತೆಗೆದುಕೊಂಡು ಪೊಲೀಸ್ ಠಾಣೆಗೆ ಬಂದಿದ್ದಳು. ಪುತ್ರಿ ಸೋನಾಲಿ ಸೇನ್(39) ಕೊಲೆ ಆರೋಪಿ.