ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಮವಸ್ತ್ರ ಧರಿಸಿಕೊಂಡೇ ಸ್ವಾಮೀಜಿಯ ಕಾಲಿಗೆ ಬಿದ್ದು, ಆಶೀರ್ವಾದ ಪಡೆದ 6 ಮಂದಿ ಪೊಲೀಸರು ವಿವಿಧ ಪೊಲೀಸ್ ಠಾಣೆಗಳಿಗೆ ವರ್ಗಾವಣೆಗೊಂಡ ಘಟನೆ ಬಾದಾಮಿಯಲ್ಲಿ ನಡೆದಿದೆ.
ಇತ್ತೀಚಿಗೆ ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿಯವರಿಗೆ ಸಮವಸ್ತ್ರ ಧರಿಸಿಕೊಂಡೇ ಪೊಲೀಸರು ಕಾಲಿಗೆ ಬಿದ್ದು, ನಮಸ್ಕಾರ ಮಾಡಿದ್ದರು. ಹಾಗೂ ಸ್ವಾಮೀಜಿಯವರು ಆಶೀರ್ವಾದ ರೂಪದಲ್ಲಿ ಹಣ ನೀಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.
ಸಮವಸ್ತ್ರದಲ್ಲಿದ್ದಾಗ ಕಾಲಿಗೆ ಬಿದ್ದು ನಮಸ್ಕರಿಸಬಾರದು. ಸಲ್ಯೂಟ್ ಹೊಡೆಯಿರಿ ಸಾಕು. ಆಶೀರ್ವಾದ ರೂಪದಲ್ಲಿ ನೀಡಿದ ಹಣ ಖರ್ಚು ಮಾಡಬೇಡಿ.ಪೂಜೆ ಮಾಡಿ. ಒಳ್ಳೆಯದಾಗುತ್ತದೆ ಎಂದು ಸ್ವಾಮೀಜಿ ಹೇಳಿದ್ದು ವಿಡಿಯೋದಲ್ಲಿದೆ.
ಬಾದಾಮಿ ಪೊಲೀಸ್ ಠಾಣೆಯ ಎಎಸ್‌ಐ ಜಿ.ಬಿ. ದಳವಾಯಿ, ಎಎಸ್‌ಐ ಡಿ.ಜಿ. ಶಿವಪುರ. ಕಾನ್‌ಸ್ಟೆಬಲ್‌ಗಳಾದ ಎಸ್.ಪಿ. ಅಂಕೋಲೆ, ಜಿ.ಬಿ. ಅಂಗಡಿ, ರಮೇಶ ಇಳಗೇರ, ಎಂ.ಎಸ್ ಹುಲ್ಲೂರ ವರ್ಗಾವಣೆಯಾದ ಸಿಬ್ಬಂದಿ.