ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಬಲ ಬೆಲೆ, ಪಿಂಚಣಿ ವ್ಯವಸ್ಥೆ ಸೇರಿ ಇನ್ನಿತರ ಬೇಡಿಕೆಗಳನ್ನು ಇಟ್ಟ ರೈತರ ಪ್ರತಿಭಟನೆ ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ.
ಹರ್ಯಾಣ ಪೊಲೀಸರು ಈಗಾಗಲೇ ಬ್ಯಾರಿಕೇಡ್ ದಾಟಲು ಬಂದ ರೈತರ ಮೇಲೆ ಅಶ್ರುವಾಯು, ಜಲಫಿರಂಗಿ, ಲಘು ಲಾಠ ಪ್ರಹಾರವನ್ನೂ ಮಾಡಿದ್ದಾರೆ. ಆದರೆ ರೈತರ ಛಲ ಇದೆಲ್ಲವನ್ನೂ ಮೀರಿದಂತಿದೆ.
ತಮ್ಮ ಕೂಗನ್ನು ಸರ್ಕಾರದವರೆಗೂ ತಲುಪಿಸಲು ರೈತರು ಮುನ್ನಡೆಯುತ್ತಿದ್ದಾರೆ. ಪ್ರತಿಭಟನಾ ನಿರತ ರೈತರನ್ನು ತಡೆಯಲು ಪೊಲೀಸರು ಇದೀಗ ಶಬ್ದಾಸ್ತ್ರ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಇದೀಗ ಪೊಲೀಸರು ಶಂಭು ಗಡಿಯಲ್ಲಿ ಲಾಂಗ್ ರೇಂಜ್ ಅಕೌಸ್ಟಿಕ್ ಡಿವೈಸ್ ಶಬ್ಸ್ರಾಸ್ತ್ರ ಬಳಕೆ ಮಾಡಿ ರೈತರನ್ನು ವಾಪಾಸ್ ಕಳಿಸುವ ಪ್ರಯತ್ನ ಮಾಡಲಿದ್ದಾರೆ. 130 ಡಿಸಿಬಲ್‌ನಷ್ಟು ಜೋರಾದ ಶಬ್ದ ಮಾಡುವ ಕೆಪಾಸಿಟಿ ಈ ಯಂತ್ರಕ್ಕಿದ್ದು, ಅತ್ಯಂತ ಕರ್ಕಶ ಧ್ವನಿ ಹೊರಡುತ್ತದೆ. ಇದನ್ನು ಸಾನಿಕ್ ಅಸ್ತ್ರವೆಂದೂ ಕರೆಯಲಾಗುತ್ತದೆ.