ಸಮಯಪಾಲನೆ ಕುರಿತು ರಾಹುಲ್ ಗಾಂಧಿಗೆ ಕಾಂಗ್ರೆಸ್ ಸಂಸದನಿಂದ ನೀತಿ ಪಾಠ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಸಂಸದ ಸುಖ್ ಜಿಂದರ್ ಸಿಂಗ್ ರಾಂಧವ ನಡುವೆ ಸಮಯಪಾಲನೆ ಕುರಿತು ಹಾಸ್ಯಮಯ ಸಂಭಾಷಣೆ ನಡೆಯಿತು.

ಈ ಕುರಿತು ವಿಡಿಯೋ ವೈರಲ್ ಆಗಿದ್ದು , 65 ವರ್ಷದ ಗುರುದಾಸ್‌ಪುರ ಸಂಸದ ರಾಂಧವ ಅವರಿಗೆ ಸಭೆಗಳಿಗೆ ಸಮಯಕ್ಕೆ ಬರುವಂತೆ ಗಾಂಧಿ ಹೇಳಿದ್ದಾರೆ.

ಇದಕ್ಕೆ, ರಾಂಧವ ಅವರು ಮಧ್ಯಪ್ರವೇಶಿಸುತ್ತಾ, ತಾನು ಸಮಯಕ್ಕೆ ಸರಿಯಾಗಿ ಬಂದಿದ್ದೇನೆ, ನೀವು ತಡವಾಗಿ ಬಂದಿದ್ದೀರಾ. ನಿಮಗಿಂತ ಮುಂಚೆ ನಾನು ಬಂದಿದ್ದೇನೆ ಎಂದು ಹೇಳಿದ್ದು, ಇದಾದ ನಂತರ ಉಭಯ ನಾಯಕರು ನಗತೊಡಗಿದರು.

https://x.com/JantaJournal/status/1866383322823155831?ref_src=twsrc%5Etfw%7Ctwcamp%5Etweetembed%7Ctwterm%5E1866383322823155831%7Ctwgr%5Ed917e105abeb2901b3ec5a01683fdc3e74fd435e%7Ctwcon%5Es1_&ref_url=https%3A%2F%2Fwww.kannadaprabha.com%2Fnation%2F2024%2FDec%2F10%2Fcame-on-time-you-were-late-congress-mp-jokes-with-rahul-gandhi-on-punctuality-video

ಇದಕ್ಕೂ ಮುನ್ನ, ಗೌತಮ್ ಅದಾನಿ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳ ಪ್ರತಿಭಟನೆಯಿಂದಾಗಿ ಪದೇ ಪದೇ ಮುಂದೂಡಲ್ಪಟ್ಟ ಸಂಸತ್ತಿನಲ್ಲಿ ಪಕ್ಷದ ಕಾರ್ಯತಂತ್ರವನ್ನು ರೂಪಿಸಲು ರಾಹುಲ್ ಗಾಂಧಿ ಕಾಂಗ್ರೆಸ್ ಸಂಸದರ ಸಭೆಯನ್ನು ನಡೆಸಿದರು. ಮತ್ತೊಂದೆಡೆ, ಎನ್‌ಡಿಎ ಸಂಸದರು ಕಾಂಗ್ರೆಸ್‌ನ ಉನ್ನತ ನಾಯಕರು ದೇಶವನ್ನು ಅಸ್ಥಿರಗೊಳಿಸಲು ಬಿಲಿಯನೇರ್ ಹೂಡಿಕೆದಾರ ಜಾರ್ಜ್ ಸೊರೊಸ್‌ನೊಂದಿಗೆ ಸೇರಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!