ಮುರ್ಷಿದಾಬಾದ್ ಗಲಭೆ ಹಿಂದೆ ರಾಜಕೀಯ ಪಿತೂರಿ: ಸಿಎಂ ಮಮತಾ ಗಂಭೀರ ಆರೋಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುರ್ಷಿದಾಬಾದ್‌ನಲ್ಲಿ ನಡೆದ ವಕ್ಫ್ ತಿದ್ದುಪಡಿ ವಿಧೇಯಕ ವಿರೋಧಿ ಗಲಭೆ ಹಿಂದೆ ರಾಜಕೀಯ ಪಿತೂರಿ ಇರುವ ಶಂಕೆ ಇದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಮುರ್ಷಿದಾಬಾದ್‌ನ ಗಲಭೆ ಪ್ರಕರಣದ ನಂತರ ಜಿಲ್ಲೆಗೆ ಭೇಟಿ ನೀಡಿದ ಅವರು, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಕೋಮು ಉದ್ವಿಗ್ನತೆ ಸೃಷ್ಟಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಬಿಎಸ್‌ಎಫ್ ಗುಂಡು ಹಾರಿಸದಿದ್ದರೆ ಹಿಂಸಾಚಾರ ಸಂಭವಿಸುತ್ತಿರಲಿಲ್ಲ. ಅಧಿಕಾರ ಇರುವಾಗ ನೀವು ಜನರನ್ನು ಧಾರ್ಮಿಕ ಆಧಾರದ ಮೇಲೆ ವಿಭಜಿಸಲು ಸಾಧ್ಯವಿಲ್ಲ. ಬಿಎಸ್‌ಎಫ್‌ಗೆ ಗಡಿ ರಕ್ಷಣೆ ಹೊಣೆ ಮಾತ್ರ ಇರಬೇಕು, ಕೋಮು ಗಲಭೆಗೆ ಪ್ರೋತ್ಸಾಹ ನೀಡಬಾರದು ಎಂದು ಅವರು ಹೇಳಿದರು.

ನಾನು ಯಾವುದೇ ಧರ್ಮದ ವಿರುದ್ಧವಲ್ಲ, ಆದರೆ ಗಲಭೆಗಳ ವಿರುದ್ಧ ಎಂದ ಅವರು, ಗಲಭೆ ಸಂತ್ರಸ್ತರನ್ನು ಬಲವಂತವಾಗಿ ಸ್ಥಳಾಂತರಿಸಲಾಗಿದೆ ಎಂದು ಗಂಭೀರ ಆರೋಪ ಮಾಡಿದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here