ಹೊಸದಿಗಂತ ವರದಿ ಮಂಡ್ಯ :
ನಗರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದ ಒಂದೇ ವೇದಿಕೆಯಲ್ಲಿ ರಾಜಕೀಯ ಬದ್ಧ ವೈರಿಗಳಾದ ಎಚ್.ಡಿ. ಕುಮಾರಸ್ವಾಮಿ ಹಾಗೂ ಎನ್. ಚಲುವರಾಯಸ್ವಾಮಿ ಅವರು ಕಾಣಿಸಿಕೊಂಡಿದ್ದು ಅಚ್ಚರಿಸಿ ಮೂಡಿಸಿತ್ತು.
ಈ ವೇಳೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಶಾಸಕರು ಒಟ್ಟಾಗಿ ಸಮ್ಮೇಳನದ ಅಭೂತಪೂರ್ವ ಯಶಸ್ಸು ಕಂಡು ಕೈಜೋಡಿಸಿ ಅಭಿನಂದಿಸುವೆ ಎಂದು ಮೆಚ್ಚುಗೆಯ ಮಾತುಗಳನ್ನಾಗಿಡ್ದು ವಿಶೇಷವಾಗಿತ್ತು.
ಇದಕ್ಕೆ ಪ್ರತಿಯಾಗಿ ಸಚಿವ ಎನ್. ಚಲುವರಾಯಸ್ವಾಮಿ ಕೂಡ ತಮ್ಮ ಭಾಷಣದಲ್ಲಿ ಕೇಂದ್ರ ಸಚಿವರೂ ಆಗಿರುವ ನನ್ನ ಆತ್ಮೀಯರಾದ ಎಚ್.ಡಿ.ಕುಮಾರಸ್ವಾಮಿ ಎಂದು ಹೇಳಿದ್ದು ಪರಸ್ಪರರ ರಾಜಕೀಯ ವೈರುಧ್ಯವನ್ನು ಬಿಟ್ಟು ಮಿತ್ರತ್ವವನ್ನು ಪ್ರದರ್ಶಿಸಿದ್ದು ಹಳೆಯ ಸ್ನೇಹವನ್ನು ಸ್ಮರಿಸುವಂತಾಗಿತ್ತು.