ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿ ಡಿಬೇಟ್ ವೇಳೆ ರಾಜಕೀಯ ನಾಯಕರಿಬ್ಬರು ಲೈವ್‌ನಲ್ಲೇ ಪರಸ್ಪರ ಕಿತ್ತಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಪಾಕ್‌ನ ಖಾಸಗಿ ವಾಹಿನಿಯೊಂದರಲ್ಲಿ ಲೈವ್ ಕಾರ್ಯಕ್ರಮದಲ್ಲಿ ವಕೀಲ ಶೇರ್ ಅಫಜಲ್ ಹಾಗೂ ಸೆನೆಟರ್ ಅಫಾನುಲ್ಹಾ ಖಾನ್ ಹೊಡೆದುಕೊಂಡಿದ್ದಾರೆ.
ನಿರೂಪಣೆ ನಡೆಸುತ್ತಿದ್ದವರು ಗಲಾಟೆ ನಿಲ್ಲಿಸಲು ಪ್ರಯತ್ನಿಸಿದರೂ ಪರಸ್ಪರ ಇಬ್ಬರೂ ಲೈವ್‌ನಲ್ಲಿ ಇದ್ದೇವೆ ಎನ್ನುವುದನ್ನೂ ಗಮನಿಸದೆ ಕಿತ್ತಾಡಿದ್ದಾರೆ. ಅಫ್ಜಲ್ ತಮ್ಮ ಸೀಟ್‌ನಿಂದ ಎದ್ದು ಅಫ್ನಾನುಲ್ಲಾಗೆ ಕೆನ್ನೆಗೆ ಬಾರಿಸುತ್ತಾರೆ. ಸಿಟ್ಟಿಗೆದ್ದ ಅಫ್ನಾನುಲ್ಲಾ ವಾಪಾಸ್ ಹೊಡೆಯಲು ಆರಂಭಿಸುತ್ತಾರೆ. ಆಂಕರ್ ಎಷ್ಟು ಪ್ರಯತ್ನಿಸಿದರೂ ಜಗಳ ನಿಲ್ಲೋದಿಲ್ಲ. ಅಶ್ಲೀಲ ಪದಗಳಲ್ಲಿ ಜಗಳವಾಡಿದ್ದು, ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.