ಶಿಗ್ಗಾಂವದಲ್ಲಿ ಕಾವೇರುತ್ತಿದೆ ಮತದಾನ: 9ಗಂಟೆಗೆ ಶೇ.10.08ರಷ್ಟು ಹಕ್ಕುಚಲಾವಣೆ

ಹೊಸದಿಗಂತ ವರದಿ ಹಾವೇರಿ:

ಶಿಗ್ಗಾಂವ – ಸವಣೂರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ 7ಗಂಟೆಗೆ ಆರಂಭಗೊಂಡಿತು. ಇನ್ನು ಬೆಳಗ್ಗೆ 9ಗಂಟೆಗೆ ಶೇ.10.08ರಷ್ಟು ಮತದಾನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ತಿಳಿಸಿದ್ದಾರೆ.

ಪುರುಷರು- 13074, ಮಹಿಳೆಯರು – 10877 ಒಟ್ಟು 23951 ಜನರು ಮತಚಲಾಯಿಸಿದ್ದು ಶೇ.10.08ರಷ್ಟು ಮತದಾನವಾಗಿದೆ. ಇನ್ನು ಹಳೇಮೆಳ್ಳಾಗಟ್ಟಿ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಿದ ಮತಗಟ್ಟೆಗೆ ಮದ್ಯವ್ಯಸನಿಯೊಬ್ಬ ಮತ ಚಲಾವಣೆಗೆ ಅವಕಾಶ ನೀಡುವಂತೆ ಗಲಾಟೆ ಮಾಡಿದ ಘಟನೆ ನಡೆಯಿತು. ಆದರೆ ಸಕಾಲಕ್ಕೆ ಪೊಲೀಸರು ಆಗಮಿಸಿ ಆತನನ್ನು ಮತಗಟ್ಟೆಯಿಂದ ಹೊರ ಕಳುಹಿಸುವಲ್ಲಿ ಯಶಸ್ವಿಯಾದರು.

ಶಿಗ್ಗಾವಿ ಸವಣೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಬುಧವಾರ ಶಿಗ್ಗಾವಿ ಪಟ್ಟಣದ ಸರಕಾರಿ ಮಾದರಿ ಕನ್ನಡ ಗಂಡು ಮಕ್ಕಳ ಶಾಲೆ ನಂ-1 ನಲ್ಲಿ ಜನಸಾಮಾನ್ಯರ ಜೊತೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!