Monday, August 8, 2022

Latest Posts

ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಯಿಂದ ಪೂಜಾರ- ರಹಾನೆ ಡ್ರಾಪ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಶ್ರೀಲಂಕಾ ವಿರುದ್ಧ ಟೆಸ್ಟ್ ಸರಣಿಗೆ ಭಾರತವು ಹೊಸ ಟೀಮ್ ಸಿದ್ದವಾಗಿದ್ದು, ಹಿರಿಯ ಬ್ಯಾಟರ್​ಗಳಾದ ಚೇತೇಶ್ವರ್​ ಪೂಜಾರ, ಅಜಿಂಕ್ಯ ರಹಾನೆ ಅವರನ್ನು ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್​ ಸರಣಿಯಿಂದ ಕೈಬಿಡಲಾಗಿದೆ.
ಕಳೆದ ಹಲವು ಸರಣಿಯಿಂದ ಇಬ್ಬರು ಕಳಪೆ ಫಾರ್ಮ್​ನಿಂದ ಪರದಾಡುತ್ತಿದ್ದು, ಇವರ ಜೊತೆಗೆ ಹಿರಿಯ ವಿಕೆಟ್​ ಕೀಪರ್​ ವೃದ್ಧಿಮಾನ್ ಸಹಾ,ಇಶಾಂತ್ ಶರ್ಮಾ ಅವರನ್ನೂ ಕೂಡ ಟೆಸ್ಟ್​ ತಂಡದಿಂದ ಡ್ರಾಪ್ ಮಾಡಲಾಗಿದೆ.
ಇನ್ನು ಈ ಆಟಗಾಗರಿಗೆ ಮತ್ತೊಂದು ಅವಕಾಶ ನೀಡಿದ್ದು,ರಣಜಿ ಟ್ರೋಫಿಯಲ್ಲಿ ಆಡಿ ರನ್​ ಮತ್ತು ವಿಕೆಟ್​ ಪಡೆದು ಫಾರ್ಮ್​ಗೆ ಮರಳುವಂತೆ ಮನವಿ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಚೇತನ್ ಶರ್ಮಾ ತಿಳಿಸಿದ್ದಾರೆ.
ಶ್ರೀಲಂಕಾ ವಿರುದ್ಧ ಟಿ20 ಸರಣಿ ಫೆಬ್ರವರಿ 24 ರಿಂದ ನಡೆಯಲಿದೆ, ಟೆಸ್ಟ್​ ಸರಣಿ ಮಾರ್ಚ್​ 1ರಿಂದ ಆರಂಭವಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss