Wednesday, February 28, 2024

ಕನ್ನಡದ ಹುಡುಗನ ಜೊತೆ ‘ಮಂತ್ರ ಮಾಂಗಲ್ಯ’ಕ್ಕೆ ಸಜ್ಜಾದ ಪೂಜಾಗಾಂಧಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂಗಾರುಮಳೆ ಬೆಡಗಿಗೆ ಇದೀಗ ಮದುವೆ ಸಂಭ್ರಮ. ಹೌದು, ತನಗೆ ಕನ್ನಡ ಕಲಿಸಿದ ಗುರುವಿನ ಜೊತೆ ಪೂಜಾ ಪ್ರೀತಿಗೆ ಬಿದ್ದಿದ್ದು,ನಾಳೆ ಹಸೆಮಣೆ ಏರಲಿದ್ದಾರೆ.

ವಿಷೇಶವೆಂದರೆ ಪೂಜಾ ಗಾಂಧಿ ಮದುವೆಯಾಗುತ್ತಿರುವುದು ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ. ಉತ್ತರ ಭಾರತದ ಬೆಡಗಿ ಇದೀಗ ಕರ್ನಾಟಕದ ಸೊಸೆಯಾಗಲಿದ್ದು, ಲಾಜಿಸ್ಟಿಕ್ಸ್ ಕಂಪನಿ ಮಾಲೀಕ ವಿಜಯ್ ಅವರನ್ನು ಪೂಜಾ ವರಿಸಲಿದ್ದಾರೆ.

ಯಲಹಂಕದಲ್ಲಿ ಮಂತ್ರ ಮಾಂಗಲ್ಯ ಪದ್ಧತಿಯಲ್ಲಿ ಮದುವೆಯಾಗಲಿದ್ದಾರೆ. ಈ ಹಿಂದೆ ಉದ್ಯಮಿ ಆನಂದ್ ಗೌಡ ಎನ್ನುವವರ ಜೊತೆ ಪೂಜಾ ಎಂಗೇಜ್ಮೆಂಟ್ ನಡೆದಿತ್ತು. ಆದರೆ ಇದಾದ ಒಂದೇ ತಿಂಗಳಿನಲ್ಲಿ ಪೂಜಾ ಎಂಗೇಜ್‌ಮೆಂಟ್ ಬ್ರೇಕ್ ಮಾಡಿಕೊಂಡಿದ್ದರು. ನನ್ನ ಹಾಗೂ ಆನಂದ್ ಐಡಿಯಾಲಜಿ ಮ್ಯಾಚ್ ಆಗೋದಿಲ್ಲ ಎಂದು ಪೂಜಾ ಹೇಳಿದ್ದರು.

ಇದೀಗ ಇಷ್ಟಪಟ್ಟ ಹುಡುಗನ ಜೊತೆ ಪೂಜಾ ವಿವಾಹವಾಗುತ್ತಿದ್ದು, ವೈವಾಹಿಕ ಜೀವನ ಸುಖಕರವಾಗಿರಲಿ ಎಂದು ಫ್ಯಾನ್ಸ್ ಹರಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!