ರಾಖಿ ಭಾಯ್‌ ಜೊತೆ ಪೂಜಾ ಹೆಗ್ಡೆ ನಟನೆ ವದಂತಿ, ಚಿತ್ರತಂಡ ಹೇಳಿದ್ದೇನು..?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪೂಜಾ ಹೆಗ್ಡೆ ಸದ್ಯ ಸೌತ್ ಇಂಡಸ್ಟ್ರಿಯಲ್ಲಿ ಮೋಸ್ಟ್ ವಾಂಟೆಡ್ ಹೀರೋಯಿನ್ ಆಗಿ ಗುರುತಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಈ ಚೆಲುವೆ ಟಾಲಿವುಡ್‌ನ ಬಹುತೇಕ ಎಲ್ಲಾ ಸ್ಟಾರ್ ಹೀರೋಗಳೊಂದಿಗೆ ನಟಿಸಿದ್ದಾರೆ. ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ ‘ಕಭಿ ಈದ್ ಕಭಿ ದಿವಾಲಿ’ ಸಿನಿಮಾದಲ್ಲೂ ಈ ಚೆಲುವೆ ಕಾಣಿಸಿಕೊಂಡಿದ್ದಾರೆ. ಇದೀಗ ಕನ್ನಡದ ನಾಯಕ ಯಶ್ ಅವರ ಮುಂದಿನ ಸಿನಿಮಾದಲ್ಲೂ ಈ ಚೆಲುವೆಯೇ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಕಳೆದ ಕೆಲವು ದಿನಗಳಿಂದ ಬರುತ್ತಿದೆ. ಆದರೆ, ಈ ಊಹಾಪೋಹಗಳಿಗೆ ತೆರೆ ಬಿದ್ದಿದ್ದು, ಯಶ್ ಮುಂದಿನ ಸಿನಿಮಾದಲ್ಲಿ ಪೂಜಾ ಹೆಗಡೆ ನಟಿಸುವುದಿಲ್ಲವಂತೆ.

ಯಶ್ ಮುಂದಿನ ಸಿನಿಮಾವನ್ನು ಸದ್ಯದಲ್ಲೇ ಲಾಂಚ್ ಮಾಡಲು ಚಿತ್ರತಂಡ ಸಜ್ಜಾಗಿದೆ. ಚಿತ್ರದ ನಾಯಕಿ ಪಾತ್ರಕ್ಕೆ ಪೂಜಾ ಹೆಗಡೆಯನ್ನು ಯಾರೂ ಸಂಪರ್ಕಿಸಿಲ್ಲವಂತೆ. ಈ ಮೂಲಕ ಯಶ್ ನೆಕ್ಸ್ಟ್ ಸಿನಿಮಾದಲ್ಲಿ ಪೂಜಾ ನಟಿಸುತ್ತಿಲ್ಲ ಎಂದು ಕನ್ನಡ ಸಿನಿ ವಲಯಗಳು ಸ್ಪಷ್ಟಪಡಿಸಿವೆ. ಯಶ್ ಮುಂದಿನ ಚಿತ್ರದಲ್ಲಿ ನಾಯಕಿಯಾಗಿ ಯಾರನ್ನು ಆಯ್ಕೆ ಮಾಡುತ್ತಾರೋ ನೋಡಬೇಕು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!