ಪೂಜಾರ- ರಹಾನೆ ಅವರ ಅನುಭವ ಅಮೂಲ್ಯವಾದದ್ದು: ​ಕೊಹ್ಲಿ ಮೆಚ್ಚುಗೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟೀಮ್ ಇಂಡಿಯಾದ ಹಿರಿಯ ಆಟಗಾರದ ಚೇತೇಶ್ವರ್ ಪೂಜಾರ ಮತ್ತು ಅಜಿಂಕ್ಯ ರಹಾನೆ ಅವರ ಅನುಭವ ಅಮೂಲ್ಯವಾದದ್ದು ಎಂದು ವಿರಾಟ್​ ಕೊಹ್ಲಿ ಹೇಳಿದ್ದಾರೆ.
ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಂಡದಲ್ಲಿ ಮಧ್ಯಮ ಕ್ರಮಾಂಕದ ಪರಿವರ್ತನೆಗೆ ಇದು ಸರಿಯಾದ ಸಮಯವೇ? ಎಂದು ಕೇಳಿದ್ದಕ್ಕೆ ಉತ್ತರಿಸಿದ ಕೊಹ್ಲಿ, ನಾವು ಅದರ ಬಗ್ಗೆ ಯಾವಾಗ ಚರ್ಚೆ ನಡೆಸುತ್ತೇವೆ ಎಂಬುದು ಸದ್ಯ ಹೇಳಲು ಸಾಧ್ಯವಿಲ್ಲ. ಪರಿವರ್ತನೆ ಎಂಬುವುದು ಆಗುವುದು ಸಹಜ. ೨ನೇ ಟೆಸ್ಟ್ದ್ಯ ಪಂದ್ಯದ 2ನೇ ಇನ್ನಿಂಗ್ಸ್​ನಲ್ಲಿ ರಹಾನೆ ಮತ್ತು ಪೂಜಾರ ಬ್ಯಾಟಿಂಗ್ ಮಾಡಿದ ರೀತಿ, ಆ ಅನುಭವ ನಮಗೆ ಅಮೂಲ್ಯವಾದದ್ದು. ವಿಶೇಷವಾಗಿ ಇಂತಹ ಸರಣಿಗಳಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ ಎಂದು ಕೊಹ್ಲಿ ಹೇಳುವ ಮೂಲಕ ಹಿರಿಯ ಆಟಗಾರರ ಪರ ಮತ್ತೊಮ್ಮೆ ಬ್ಯಾಟ್‌ ಬೀಸಿದರು.
ಈ ಹಿಂದೆ ನಾವು ವಿದೇಶಿ ಸರಣಿಗಳನ್ನಾಡುವಾಗ ಕಠಿಣ ಸಂದರ್ಭದಲ್ಲಿ ತಂಡಕ್ಕಾಗಿ ಸಾಕಷ್ಟು ಬಾರಿ ಅದ್ಭುತ ಪ್ರದರ್ಶನವನ್ನು ಇವರು ನೀಡಿದ್ದಾರೆ. ಇವರು ಯಾವಾಗಲೂ ಪ್ರಭಾವಿ ಪ್ರದರ್ಶನಗಳೊಂದಿಗೆ ಹೆಜ್ಜೆ ಹಾಕುತ್ತಾರೆ. ಆಸ್ಟ್ರೇಲಿಯದಲ್ಲೂ ಅದನ್ನು ನೋಡಿದ್ದೇವೆ ಮತ್ತು ಕಳೆದ ಟೆಸ್ಟ್‌ನಲ್ಲೂ ಅವರು ಅಂಥ ತೋರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಪ್​ಟೌನ್​ನಲ್ಲಿ ಮಂಗಳವಾರದಿಂದ 3ನೇ ಟೆಸ್ಟ್ ಪಂದ್ಯ ಆರಂಭವಾಗಲಿದೆ.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!