Monday, December 11, 2023

Latest Posts

ಬಿಜೆಪಿ ಕಚೇರಿಯಲ್ಲಿ ಪೂರ್ಣಾಹುತಿ ಪೂಜೆ, ವಿಜಯೇಂದ್ರ ‘ಮುಂದೆ ಮುಖ್ಯಮಂತ್ರಿಯಾಗಲಿ’ ಎಂದು ಆಶೀರ್ವಾದ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದು ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿ ಸಂಭ್ರಮ ಮನೆಮಾಡಿದೆ. ಜಗನ್ನಾಥ ಭವನದಲ್ಲಿ ಬಿಜೆಪಿ ನೂತನ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಪದಗ್ರಹಣ ಹಿನ್ನೆಲೆಯಲ್ಲಿ ಪೂರ್ಣಾಹುತಿ ಹೋಮ, ಪೂಜಾ ಕಾರ್ಯಕ್ರಮಗಳು ನೆರವೇರಿವೆ.

ಬಿಜೆಪಿ ಕಚೇರಿಗೆ ಎಲ್ಲ ಗಣ್ಯರು ಆಗಮಿಸಿದ್ದು, ನಳಿನ್ ಕುಮಾರ್ ಕಟೀಲು ಎಲ್ಲರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ವಿಜಯೇಂದ್ರ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಲಾಗಿದ್ದು, ಇದಕ್ಕೂ ಮುನ್ನ ವಿಜಯೇಂದ್ರ ಯಡಿಯೂರಪ್ಪನವರ ಆಶೀರ್ವಾದ ಪಡೆದಿದ್ದಾರೆ.

ಪೂರ್ಣಾಹುತಿಯ ಪೂಜೆಯ ವೇಳೆ ಅರ್ಚರಕರು ವಿಜಯೇಂದ್ರ ಮುಂದೆ ಮುಖ್ಯಮಂತ್ರಿಯಾಗಲಿ ಎಂದು ಹರಸಿದ್ದು, ಕಚೇರಿಯಲ್ಲಿ ಸಂಭ್ರಮ ಮನೆಮಾಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!