ಹೃದಯಾಘಾತ: ಬೆಳ್ಳಿತೆರೆಯ ಖ್ಯಾತ ಖಳನಟ ಕಜಾನ್ ಖಾನ್ ವಿಧಿವಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತಮಿಳು ಮತ್ತು ಕನ್ನಡ ಚಿತ್ರರಂಗದಲ್ಲಿ ಖಳನಾಯಕನಾಗಿ ನಟಿಸಿದ್ದ ನಟ ಕಝಾನ್ ಖಾನ್ ಹೃದಯಾಘಾತದಿಂದ ನಿಧನರಾಗಿದ್ದಾರೆ.

ದಕ್ಷಿಣ ಭಾರತದ ಸಿನಿಮಾಗಳಲ್ಲಿ ವಿಲನ್​ ಪಾತ್ರ ಮಾಡುವ ಮೂಲಕ ಕಝಾನ್​ ಖಾನ್​ ಅವರು ಪ್ರಸಿದ್ಧರಾಗಿದ್ದರು. ಮಲಯಾಳಂ, ತಮಿಳು ಸಿನಿಮಾಗಳಲ್ಲಿ ಅವರು ಹೆಚ್ಚಾಗಿ ನಟಿಸಿದ್ದರು. ಕನ್ನಡದ ‘ಹಬ್ಬ’, ‘ನಾಗದೇವತೆ’ ಮುಂತಾದ ಸಿನಿಮಾಗಳಲ್ಲಿ ಅವರು ಅಭಿನಯಿಸಿದ್ದರು. ಕಝಾನ್​ ಖಾನ್​ ನಿಧನಕ್ಕೆ ಅಭಿಮಾನಿಗಳು ಹಾಗೂ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ. ಖ್ಯಾತ ನಟನ ಸಾವಿನಿಂದ ಚಿತ್ರರಂಗಕ್ಕೆ ಆಘಾತವಾಗಿದೆ.

ಕಝಾನ್​ ಖಾನ್​ ಅವರ ನಿಧನದ ಸುದ್ದಿಯನ್ನು ನಿರ್ಮಾಪಕ ಎನ್​ಬಿ ಬದುಶ ಅವರು ಖಚಿತಪಡಿಸಿದ್ದಾರೆ. ಈ ಮೂಲಕ ಅವರು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ‘ಗಂಧರ್ವಂ’, ‘ಸಿಐಡಿ ಮೂಸಾ’, ‘ದಿ ಕಿಂಗ್​’, ‘ಡ್ರೀಮ್ಸ್​’, ‘ಸೇತುಪತಿ ಐಪಿಎಸ್​’, ‘ವಾನತೈಪೋಲ’, ‘ಮೇಟ್ಟುಕುಡಿ’, ‘ವಲ್ಲರಸು’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಕಝಾನ್​ ಖಾನ್​ ನಟಿಸಿದ್ದರು. ಅವರು ಮಾಡಿದ ಗಮನಾರ್ಹ ಪ್ರಾತ್ರಗಳನ್ನು ಅಭಿಮಾನಿಗಳು ಈಗ ನೆನಪು ಮಾಡಿಕೊಳ್ಳುತ್ತಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸುತ್ತಿದ್ದಾರೆ.

ಕಝಾನ್​ ಖಾನ್​ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದು 1992ರಲ್ಲಿ. ತಮಿಳು ಸಿನಿಮಾಗಳಿಂದ ಅವರ ಬಣ್ಣದ ಬದುಕು ಆರಂಭ ಆಯಿತು. ನಂತರ 1995ರಲ್ಲಿ ಅವರು ಮಲಯಾಳಂ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಅಲ್ಲಿಯೂ ಅವರಿಗೆ ಯಶಸ್ಸು ಸಿಕ್ಕಿತು.

ವಿಲನ್​ ಪಾತ್ರಗಳಲ್ಲಿ ಅವರನ್ನು ನೋಡಲು ಪ್ರೇಕ್ಷಕರು ಇಷ್ಟಪಡುತ್ತಿದ್ದರು. 50ಕ್ಕೂ ಅಧಿಕ ಸಿನಿಮಾಗಳಲ್ಲಿ ಕಝಾನ್​ ಖಾನ್​ ನಟಿಸಿದ್ದರು. ಅನೇಕ ಸ್ಟಾರ್​ ನಟರ ಜೊತೆ ಅವರು ತೆರೆ ಮೇಲೆ ಕಾಣಿಸಿಕೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!