ಪೋರ್ಷೆ ಕಾರು ಅಪಘಾತ: ಬಾಲಕನ ತಂದೆ, ಅಜ್ಜನಿಗೆ ಜಾಮೀನು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪೋರ್ಷೆ ಕಾರು ಅಪಘಾತದ ಆರೋಪಿಯಾಗಿರುವ ಬಾಲಕನ ತಂದೆ ಮತ್ತು ಅಜ್ಜನಿಗೆ ಪುಣೆ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ.
ಅವರಿಬ್ಬರನ್ನು ಕುಟುಂಬದ ಚಾಲಕನನ್ನು ಅಪಹರಿಸಿದ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಮೇ ಅಂತ್ಯಕ್ಕೆ 17 ವರ್ಷದ ಬಾಲಕನ ತಂದೆ, ಮಹಾರಾಷ್ಟ್ರದ ಬಿಲ್ಡರ್ ವಿಶಾಲ್ ಅಗರ್ವಾಲ್ ಮತ್ತು ಆತನ ಅಜ್ಜನಿಗೆ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯ ಜಾಮೀನು ನೀಡಿದೆ.

ಪೊಲೀಸರ ಪ್ರಕಾರ, ಬಾಲಕನ ತಂದೆ ಮತ್ತು ಅಜ್ಜ ಮೇ 19 ರಂದು ರಾತ್ರಿ 11 ಗಂಟೆಗೆ ಪೊಲೀಸ್ ಠಾಣೆಯಿಂದ ಹೊರಟ ನಂತರ ತಮ್ಮ ಕುಟುಂಬ ಕಾರು ಚಾಲಕನನ್ನು ಅಪಹರಿಸಿದ್ದರು. ಅವರನ್ನು ತಮ್ಮ ಬಂಗಲೆಯಲ್ಲಿ ಇಟ್ಟುಕೊಂಡು ಅಪಘಾತ ಸಂಭವಿಸಿದಾಗ ನಾನೇ ಕಾರು ಓಡಿಸುತ್ತಿದ್ದೆ ಎಂದು ಒಪ್ಪಿಕೊಳ್ಳುವಂತೆ ಬೆದರಿಕೆ ಒಡ್ಡಿದ್ದರು. ಈ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು.

ಕುಡಿದ ಮತ್ತಿನಲ್ಲಿ 17 ವರ್ಷದ ಬಾಲಕ ಚಲಾಯಿಸುತ್ತಿದ್ದ ಪೋರ್ಷೆ ಕಾರು ಬೈಕ್ ಹೋಗುದ್ದಿ ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್ ಗಳಿಗೆ ಡಿಕ್ಕಿ ಹೊಡೆದಿತ್ತು.

ಬಾಲಾಪರಾಧಿ ನ್ಯಾಯ ಕಾಯ್ದೆಗೆ ಸಂಬಂಧಿಸಿದ ಪ್ರಕರಣದಲ್ಲಿ ಮೇ 21 ರಂದು ಬಂಧಿಸಲ್ಪಟ್ಟ ಅಗರ್ವಾಲ್​ಗೆ ಕಳೆದ ತಿಂಗಳು ನ್ಯಾಯಾಲಯ ಜಾಮೀನು ನೀಡಿತ್ತು. ಪೋಷಕರಾಗಿ ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲವಾದ ಕಾರಣ ಬಿಲ್ಡರ್ ವಿರುದ್ಧ ಮೋಟಾರು ವಾಹನ ಕಾಯ್ದೆ (ಎಂವಿಎ) ಮತ್ತು ಬಾಲನ್ಯಾಯ ಕಾಯ್ದೆ (ಜೆಜೆಎ) ಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಜೂನ್ 25 ರಂದು, ಬಾಂಬೆ ಹೈಕೋರ್ಟ್ ಬಾಲಕನನ್ನು ವೀಕ್ಷಣಾ ಗೃಹದಿಂದ ಬಿಡುಗಡೆ ಮಾಡುವಂತೆ ನಿರ್ದೇಶನ ನೀಡಿತು. ಅವನ ಬಂಧನದ ಬಗ್ಗೆ ಬಾಲನ್ಯಾಯ ಮಂಡಳಿಯ (ಜೆಜೆಬಿ) ಆದೇಶವು ಕಾನೂನುಬಾಹಿರವಾಗಿದೆ ಎಂದು ಹೇಳಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!