Thursday, March 23, 2023

Latest Posts

ಧನಾತ್ಮಕವಾಗಿ ತೆರೆದ ಷೇರುಪೇಟೆ: 468 ಅಂಕ ಜಿಗಿದ ಸೆನ್ಸೆಕ್ಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ವಾರದ ಆರಂಭದ ವಹಿವಾಟಿನಲ್ಲಿ ದೇಶೀಯ ಈಕ್ವಿಟಿ ಮಾರುಕಟ್ಟೆಗಳು ಸಕಾರಾತ್ಮಕವಾಗಿ ತೆರೆದಿವೆ. ಬಿಎಸ್‌ಇ ಸೆನ್ಸೆಕ್ಸ್ 468.06 ಅಂಕಗಳು ಅಥವಾ 0.78ಶೇಕಡಾ ಏರಿಕೆಯಾಗಿ 60,277.03 ಅಂಕಗಳಲ್ಲಿ ವಹಿವಾಟು ನಡೆಸುತ್ತಿದೆ. NSE ನಿಫ್ಟಿ 50ಯು 124.20 ಅಂಕಗಳು ಅಥವಾ 0.71 ಶೇಕಡಾ ಏರಿಕೆಯಾಗಿ 17,718.55 ಅಂಕಗಳಿಗೆ ತಲುಪಿದೆ.

ನಿಫ್ಟಿಯಲ್ಲಿ ಅದಾನಿ ಎಂಟರ್‌ಪ್ರೈಸಸ್, ಅದಾನಿ ಪೋರ್ಟ್ಸ್, ಎಚ್‌ಸಿಎಲ್ ಟೆಕ್, ಇನ್ಫೋಸಿಸ್ ಮತ್ತು ಟಿಸಿಎಸ್ ಟಾಪ್ ಗೇನರ್ ಆಗಿದ್ದರೆ, ಬ್ರಿಟಾನಿಯಾ, ಟಾಟಾ ಸ್ಟೀಲ್, ಹಿಂಡಾಲ್ಕೊ, ಜೆಎಸ್‌ಡಬ್ಲ್ಯೂ ಸ್ಟೀಲ್ ಮತ್ತು ಕೋಲ್ ಇಂಡಿಯಾ ಟಾಪ್ ಲೂಸರ್‌ಗಳಾಗಿವೆ.

ಬ್ಯಾಂಕ್ ನಿಫ್ಟಿ 225.40 ಅಂಕಗಳು ಅಥವಾ 0.55 ಶೇ. ಏರಿಕೆಯಾಗಿ 41,476.75 ಕ್ಕೆ ತಲುಪಿದೆ. ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಪ್ರಮುಖ ಲಾಭಗಳೊಂದಿಗೆ ಎಲ್ಲಾ ಘಟಕಗಳು ಹಸಿರು ಬಣ್ಣದಲ್ಲಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!