ವಿದ್ಯುತ್ ದರ ಏರಿಕೆ ಮುಂದೂಡಿ – ಕಾಸಿಯಾ ಮನವಿ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಪ್ರತಿ ಯೂನಿಟ್‌ಗೆ ಸರಾಸರಿ ₹ 1.58 ವಿದ್ಯುತ್ ದರವನ್ನು ಹೆಚ್ಚಿಸಲು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಎಸ್ಕಾಂಗಳು ಸಲ್ಲಿಸಿರುವ ಪ್ರಸ್ತಾವನೆಗೆ ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಕಳೆದ ವರ್ಷದಲ್ಲಿ ವಿದ್ಯುತ್ ದರವನ್ನು ಮೂರು ಬಾರಿ ಹೆಚ್ಚಿಸಲಾಗಿದೆ ಎಂಬ ಅಂಶದ ಕಡೆಗೆ ಸರಕಾರದ ಗಮನ ಸೆಳೆಯುತ್ತಾ, ಸೂಕ್ಷ್ಮ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳು ಸಾಂಕ್ರಾಮಿಕ ರೋಗದ ಮೂರನೇ ಅಲೆಯೊಂದಿಗೆ ಹೋರಾಡುತ್ತಿರುವ ಸಮಯದಲ್ಲಿ, ಎಸ್ಕಾಮ್‌ಗಳು ವಿದ್ಯುತ್ ದರ ಏರಿಕೆಗೆ ಮುಂದಾಗಿರುವುದು ವಿಪರ್ಯಾಸವಾಗಿದೆ ಎಂದು ಕಾಸಿಯಾ ತಿಳಿಸಿದೆ.

ಕಳೆದ ವರ್ಷಗಳಿಂದ ಎದುರಿಸುತ್ತಿರುವ ಸಾಂಕ್ರಾಮಿಕ ಬಿಕ್ಕಟ್ಟು ಮತ್ತು ಸಾಂಕ್ರಾಮಿಕ ಪ್ರೇರಿತ ಸಮಸ್ಯೆಗಳಿಂದ ಎಂ.ಎಸ್.ಎಂ.ಇ.ಗಳು ಅತ್ಯಂತ ದುರ್ಬಲವಾಗಿವೆ. ಆದ್ದರಿಂದ ವಿದ್ಯುತ್ ದರ ಹಾಗೂ ಇತರೆ ಏರಿಕೆಗಳ ಪ್ರಸ್ತಾವನೆಯನ್ನು ಮುಂದೂಡುವಂತೆ ಕಾಸಿಯಾ ರಾಜ್ಯ ಸರಕಾರವನ್ನು ಒತ್ತಾಯಿಸುತ್ತದೆ. ಒಂದು ವೇಳೆ ಪ್ರಸ್ತಾವನೆಯನ್ನು ಪರಿಗಣಿಸಿದರೆ ಈಗಾಗಲೇ ದುರ್ಬಲವಾಗಿರುವ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳು ಮತ್ತಷ್ಟು ದುರ್ಬಲವಾಗುವುದಲ್ಲದೆ ಅವುಗಳ ಕಾರ್ಯಸಾಧ್ಯತೆ ಮೇಲೆ ತೀಕ್ಷ್ಣ ಪರಿಣಾಮ ಬೀರಲಿದೆ ಎಂದು ಕಾಸಿಯಾ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!