ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಳೆ ಸಿಎ ಪರೀಕ್ಷೆಯ ಸಮಯಕ್ಕೆ ಬೆಂಗಳೂರು ನಗರ ವಿವಿಯಿಂದ ಬಿಕಾಂ ಪರೀಕ್ಷೆಯನ್ನು ನಿಗದಿ ಪಡಿಸಿ ಎಡವಟ್ಟು ಮಾಡಿ ಕೊಂಡಿತ್ತು. ಇದೀಗ ಎಚ್ಛೆತ್ತುಕೊಂಡ ಇಲಾಖೆ ನಾಳೆ ನಡೆಸಲು ನಿಗದಿ ಪಡಿಸಿದ್ದ ಎಲ್ಲಾ ಸ್ನಾತಕ ಪದವಿಯ ಪರೀಕ್ಷೆಯನ್ನು ಮುಂದೂಡಿಕೆ ಮಾಡಿ ಆದೇಶಿಸಲಾಗಿದೆ.
ಈ ಕುರಿತಂತೆ ಬೆಂಗಳೂರುನಗರ ವಿವಿಯ ಸೆಂಟ್ರಲ್ ಕ್ಯಾಂಪಸ್ ನ ಮೌಲ್ಯಮಾಪನದ ಕುಲಸಚಿವರು ಅಧಿಸೂಚನೆ ಹೊರಡಿಸಿದ್ದಾರೆ.
ದಿನಾಂಕ 16-01-2025ರಂದು ಮಧ್ಯಾಹ್ನ 2 ಗಂಟೆಗೆ ನಿಗದಿಯಾಗಿದ್ದ ಬೆಂಗಳೂರು ನಗರ ವಿವಿಯ ಎಸ್ಇಪಿ 1ನೇ ಸೆಮಿಸ್ಟರ್ ಎಲ್ಲಾ ಸ್ನಾತಕ ಪದವಿ ಕೋರ್ಸ್ ಗಳ ಪರೀಕ್ಷೆಯನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದಿದ್ದಾರೆ.
ಇನ್ನು ಮುಂದೂಡಲಾಗಿರುವ ಪರೀಕ್ಷೆಯ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂಬುದಾಗಿ ಪರೀಕ್ಷಾ ಕೇಂದ್ರಗಳ ಮುಖ್ಯಸ್ಥರು ಮತ್ತು ಪ್ರಾಂಶುಪಾಲರುಗಳಿಗೆ ತಿಳಿಸಿದ್ದಾರೆ.