ವಿದ್ಯುತ್ ಕೇಬಲ್ ಕದ್ದ ಮೂವರ ಬಂಧನ

ಹೊಸದಿಗಂತ ವರದಿ, ಬನವಾಸಿ:

ಕೃಷಿ ಪಂಪ್ ಸೆಟ್ ಗೆ ಹಾಕಲಾಗಿದ್ದ ವಿದ್ಯುತ್ ಕೇಬಲ್ ಕದ್ದ ಮೂವರನ್ನು ಬನವಾಸಿ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಹಿರೇಕೆರೂರ ತಾಲೂಕಿನ ಮತ್ತಿಹಳ್ಳಿಯ ಸೋಮಪ್ಪ ನೀಲಪ್ಪ ಒಡೆಯನಪುರ(28), ಶಿವರಾಜ ಗುತ್ಯಪ್ಪ ಮಂತಿಕೊಪ್ಪ ( 22 ) ಹಾಗೂ ಸೈಯದ್ ಫರ್ಮಾನ ತಂದೆ ಹಸನ್ ಮಿಯಾ ಪೇಟಿ, ( 27) ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿತರು ಸಮೀಪದ ಮೊಗವಳ್ಳಿಯ ಸದಾನಂದ ಹಳ್ಳಕೊಪ್ಪ ಅವರು ತಮ್ಮ ಜಮೀನಿನ ಪಕ್ಕದಲ್ಲಿರುವ ವರದಾ ನದಿಯಿಂದ ಮೋಟಾರ ಮಶೀನ್ ಮೂಲಕ ನೀರನ್ನು ಉಪಯೋಗಿಸಿಕೊಳ್ಳಲು ಅಳವಡಿಸಿದ್ದ ಸುಮಾರು 250 ಅಡಿ ಉದ್ದದ ಕೇಬಲ್ ಕದ್ದಿದ್ದರು. ಅಲ್ಲದೇ ಈ ಮೂವರು ಈ ಹಿಂದೆಯು 235 ಅಡಿ ಕೇಬಲ್ ಹಾಗೂ ಮೋಟಾರ್ ಕಳ್ಳತನ ಮಾಡಿದ್ದ ಬಗ್ಗೆ ತನಿಖೆಯಿಂದ ತಿಳಿದು ಬಂದಿದೆ. ಈ ಕುರಿತಂತೆ ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬನವಾಸಿ ಠಾಣೆಯ ಪಿಎಸ್ಐ ಹನುಮಂತ ಬಿರಾದಾರ ಹಾಗೂ ಚಂದ್ರಕಲಾ ಪತ್ತಾರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಂತೋಷ, ಶಿವರಾಜ್, ಮಂಜುನಾಥ, ಗಣೇಶ, ಮಂಜಪ್ಪ ಅವರು ಕಾರ್ಯಚರಣೆ ನಡೆಸಿ ಆರೋಪಗಳನ್ನು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here