ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿಗೆ ಬೆಸ್ಕಾಂ ಶಾಕ್ ನೀಡಿದೆ. ವರ್ಕ್ ಫ್ರಮ್ ಹೋಂನಲ್ಲಿರುವ ಉದ್ಯೋಗಿಗಳು ನಿಮ್ಮ ಲ್ಯಾಪ್ಟಾಪ್, ಫೋನ್ ಮೊದಲೇ ಚಾರ್ಜ್ ಮಾಡಿಕೊಳ್ಳಿ ಇಲ್ಲಾಂದರೆ ನಾನಾ ಕಷ್ಟ ಪಡಬೇಕಾದೀತು ಜೋಕೆ. ಯಾಕಂದರೆ ಮತ್ತೆ ಬೆಂಗಳೂರಿಗರಿಗೆ ಕಾಡಲಿದೆ ಕರೆಂಟ್ ಸಮಸ್ಯೆ. ಇಂದು ಮತ್ತೆ ನಾಳೆ ಬೆಂಗಳೂರಿನ ಹಲವು ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಈ ಬಗ್ಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ) ಗುರುವಾರದವರೆಗೆ ವಿದ್ಯುತ್ ವ್ಯತ್ಯಯವಾಗುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಕೆಲವು ದುರಸ್ತಿ ಮತ್ತು ನಿರ್ವಹಣೆ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಎರಡು ದಿನಗಳ ಕಾಲ ಈ ಏರಿಯಾಗಳಲ್ಲಿ ಕರೆಂಟ್ ಇರುವುದಿಲ್ಲ.
ಇಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯವಾಗಲಿರುವ ಏರಿಯಾಗಳಲ್ಲಿ ನಿಮ್ಮ ಏರಿಯಾ ಇದೆಯಾ ಅಂತ ನೋಡಿಕೊಳ್ಳಿ.
ಕುವೆಂಪುನಗರ, ಎಸ್ಎಸ್ ಲೇಔಟ್ ಎ ಬ್ಲಾಕ್ ಎಸ್ಎಸ್ ಮಹಲ್, ಲಕ್ಷ್ಮಿ ಫ್ಲೋರ್ ಮಿಲ್ ಬ್ಯಾಕ್ ಸೈಡ್, ಮಾವಿಂಟಾಪ್ ಆಸ್ಪತ್ರೆ, ಎಸ್ಎನ್ ಲೇಔಟ್ ಮತ್ತು ಜಿ.ಎಚ್.ಪಾರ್ಕ್ ಸುತ್ತಮುತ್ತಲಿನ ಪ್ರದೇಶಗಳು. ಹಾಗೂ ಮಂಡಿಪೇಟೆ, ಚಾಮರಾಜಪೇಟೆ ಬಿನ್ನಿ ಕಂಪನಿ ರಸ್ತೆ, ವೃತ್ತ, ಗಡಿಯಾರ ಗೋಪುರ, ಬಾಪೂಜಿ ಆಸ್ಪತ್ರೆ, ಡೆಂಟಲ್ ಕಾಲೇಜು ರಸ್ತೆ ಮತ್ತು ಅದರ ಸುತ್ತಮುತ್ತ. ಜೊತೆಗೆ ಮಹಾವೀರ ರಸ್ತೆ, ದೊಡ್ಡಪೇಟೆ, ವಿಜಯಲಕ್ಷ್ಮಿ ರಸ್ತೆ, ಚೌಕಿಪೇಟೆ, ಬಸವರಾಜ ಪೇಟೆ, ಹಗೇಡಿಬ್ಬ ವೃತ್ತ, ಅಂಬೇಡ್ಕರ್ ವೃತ್ತ, ಸಿಜಿ ಆಸ್ಪತ್ರೆ ರಸ್ತೆ, ಲಕ್ಷ್ಮಿ ಫ್ಲೋರ್ ಮಿಲ್, ಸುಕ್ಷೇಮ ಆಸ್ಪತ್ರೆಯಿಂದ ಲಕ್ಷ್ಮಿ ಫ್ಲೋರ್ ಮಿಲ್ ಜಂಕ್ಷನ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕರೆಂಟ್ ಕಟ್ ಆಗಲಿದೆ.