ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಬಾಣಸವಾಡಿ ಹಾಗೂ ಹೆಚ್‌ಬಿಆರ್ ಲೇಔಟ್ ವಿದ್ಯುತ್ ಉಪಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿಗಳು ನಡೆಯಲಿರುವ ಹಿನ್ನೆಲೆಯಲ್ಲಿ, ನಗರದ ಹಲವು ಪ್ರಮುಖ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬೆಸ್ಕಾಂ ನೀಡಿರುವ ಮಾಹಿತಿಯಂತೆ ಫೆಬ್ರವರಿ 3 ರಿಂದ ಫೆಬ್ರವರಿ 9ರ ವರೆಗೆ ವಿವಿಧ ಸಮಯಗಳಲ್ಲಿ ಪವರ್ ಕಟ್ ಇರಲಿದೆ.
ಫೆಬ್ರವರಿ 3 (ಮಂಗಳವಾರ): ಬೆಳಿಗ್ಗೆ 10:00 ರಿಂದ ಸಂಜೆ 6:00 ರವರೆಗೆ, ಬಾಣಸವಾಡಿ 66 ಕೆ.ವಿ ಲೈನ್‌ನಲ್ಲಿ ಕೆಲಸ ನಡೆಯುವುದರಿಂದ ಈ ಕೆಳಗಿನ ಭಾಗಗಳಲ್ಲಿ ಸಂಪೂರ್ಣ ವಿದ್ಯುತ್ ಇರುವುದಿಲ್ಲ:
ಹೆಚ್‌ಆರ್‌ಬಿಆರ್ ಲೇಔಟ್: 1ನೇ, 2ನೇ ಮತ್ತು 3ನೇ ಬ್ಲಾಕ್, ಸರ್ವೀಸ್ ರಸ್ತೆ.
ಪ್ರಮುಖ ರಸ್ತೆಗಳು: ಕಮ್ಮನಹಳ್ಳಿ ಮೇನ್ ರೋಡ್, ಸಿಎಂಆರ್ ರಸ್ತೆ, 100 ಅಡಿ ಮತ್ತು 80 ಅಡಿ ರಸ್ತೆ, ರಾಮಮೂರ್ತಿ ನಗರ ಮೇನ್ ರೋಡ್.
ಬಡಾವಣೆಗಳು: ಬಾಬುಸಾಪಾಳ್ಯ, ಹೊರಮಾವು, ಕಸ್ತೂರಿ ನಗರ (ಭಾಗ), ಓಎಂಬಿಆರ್ ಲೇಔಟ್ (ಭಾಗ), ಬಾಣಸವಾಡಿ, ಬಿ. ಚನ್ನಸಂದ್ರ, ಚೆಲೆಕರೆ, ಸಮುದ್ರಿಕಾ ಎನ್‌ಕ್ಲೇವ್.
ಇತರೆ ಪ್ರದೇಶಗಳು: ಹೆಣ್ಣೂರು ವಿಲೇಜ್, ಶಕ್ತಿ ನಗರ, ಆರ್ಕಾವತಿ ಲೇಔಟ್, ಪ್ರಕೃತಿ ಟೌನ್‌ಶಿಪ್, ಬಾಲಾಜಿ ಲೇಔಟ್, ವಿಜಯ ಬ್ಯಾಂಕ್ ಕಾಲೋನಿ, ನಿಸರ್ಗ ಕಾಲೋನಿ ಹಾಗೂ ಸುತ್ತಮುತ್ತಲಿನ ಅಪಾರ್ಟ್‌ಮೆಂಟ್‌ಗಳು.
ಫೆಬ್ರವರಿ 4 (ಬುಧವಾರ) ರಿಂದ ಫೆಬ್ರವರಿ 9 (ಸೋಮವಾರ) ರವರೆಗೆ, ಹೆಚ್‌ಬಿಆರ್ ಸ್ಟೇಷನ್‌ನಲ್ಲಿ ಸತತ ನಿರ್ವಹಣಾ ಕೆಲಸಗಳು ನಡೆಯಲಿದ್ದು, ಈ ಅವಧಿಯಲ್ಲಿ ಮಧ್ಯಂತರವಾಗಿ ವಿದ್ಯುತ್ ಕಡಿತಗೊಳ್ಳಲಿದೆ:
ಎಲ್‌ಆರ್‌ಪಿ ಆಫೀಸ್, ಸೋಭಾ ಕ್ರೈಸಾಂಥಿಮಮ್, ಗೋವಿಂದಪುರ, ಕಾರ್ಲೆ, ಬೃಂದಾವನ ನಗರ, ಹೆಗ್ಗಡೆ ನಗರ, ಗಾಂಧಿನಗರ, ಟೈಟನ್ ಗ್ಯಾರೇಜ್, ಬಿಎಂಟಿಸಿ ಡೆಪೋ ಮತ್ತು ಸುತ್ತಮುತ್ತಲ ಪ್ರದೇಶಗಳು.



