ಹೊಸದಿಗಂತ ಡಿಜಿಟಲ್ ಡೆಸ್ಕ್
ಟೈಟಲ್ ನಿಂದಲೇ ಸ್ಯಾಂಡಲ್ ವುಡ್ ನಲ್ಲಿ ಸುದ್ದಿಯಾಗಿರುವ ಲಕ್ಕಿಮ್ಯಾನ್ ಸಿನೆಮಾದ ಟೀಸರ್ ಅನಾವರಣಗೊಂಡಿದೆ. ಇದ್ರಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ ನಟಿಸಿದ್ದು, ಅಪ್ಪುನನ್ನು ಮತ್ತೊಮ್ಮೆ ನೋಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ.
ಪುನೀತ್ ನಿಧನಕ್ಕೂ ಮೊದಲು ನಟಿಸಿದ್ದ ಕೆಲವು ರಿಲೀಸ್ ಆಗದ ಸಿನಿಮಾಗಳು ಇದೀಗ ಬಿಡುಗಡೆಯಾಗುತ್ತಿವೆ. ಅದರಲ್ಲಿ ಲಕ್ಕಿ ಮ್ಯಾನ್ ಸಿನಿಮಾ ಕೂಡ ಒಂದು.
ಲಕ್ಕಿ ಮ್ಯಾನ್ ಸಿನಿಮಾ ಇದೀಗ ಬಿಡುಗಡೆಗೆ ಸಜ್ಜಾಗುತ್ತಿದೆ. ಮುಂಚಿತವಾಗಿ ಸಿನಿಮಾತಂಡ ಟೀಸರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
ಅಂದಹಾಗೆ ಲಕ್ಕಿ ಮ್ಯಾನ್ ನಲ್ಲಿ ನಟಿ ಡಾರ್ಲಿಂಗ್ ಕೃಷ್ಣ ಮತ್ತು 777 ಚಾರ್ಲಿ ಖ್ಯಾತಿಯ ನಟಿ ಸಂಗೀತ ಶೃಂಗೇರಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅಪ್ಪು ದೇವರ ಪಾತ್ರದಲ್ಲಿ ನಟಿಸಿದ್ದಾರೆ.
ಸದ್ಯ ರಿಲೀಸ್ ಆಗಿರುವ ಟೀಸರ್ ನಲ್ಲಿ ಪುನೀತ್ ರಾಜ್ ಕುಮಾರ್ ಹೇಳಿರುವ ಡೈಲಾಗ್ ವೈರಲ್ ಆಗಿದೆ. ನಿನ್ನ ಲೈಫ್‌ನಲ್ಲಿ ಆಗಿರುವ ಮಿಸ್ಟೇಕ್‌ಗಳನ್ನು ಸರಿಮಾಡಿಕೊಳ್ಳಲು ನಿನಗೆ ಸೆಕೆಂಡ್ ಚಾನ್ಸ್ ಕೊಡ್ತೀನಿ’ ಎಂದು ಹೇಳಿರುವ ಡೈಲಾಗ್ ಅಭಿಮಾನಿಗಳ ಹೃದಯ ಗೆದ್ದಿದೆ.
ಲಕ್ಕಿ ಮ್ಯಾನ್ ಟೀಸರ್ ರಿಲೀಸ್ ಆಗುತ್ತಿದ್ದಂತೆ ಪುನೀತ್ ರಾಜ್ ಕುಮಾರ್ ಹೆಸರ್ ಟ್ವಿಟ್ಟರ್ ನಲ್ಲಿ ಟ್ರೆಂಡಿಂಗ್ ನಲ್ಲಿದೆ. ಅಭಿಮಾನಿಗಳು ಲಕ್ಕಿಮ್ಯಾನ್ ಟೀಸರ್ ಶೇರ್ ಮಾಡಿ ದೇವರು ತನ್ನದೇ ಸ್ಟೈಲ್‌ನಲ್ಲಿ ಬರ್ತಿದ್ದಾರೆ ಎಂದು ಹೇಳುತ್ತಿದ್ದಾರೆ.
ಅಂದಹಾಗೆ ಈ ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ವಿಶೇಷ ಹಾಡಿಗೆ ಸಖತ್ ಡಾನ್ಸ್ ಮಾಡಿದ್ದಾರೆ. ಡಾನ್ಸರ್ ಪ್ರಭುದೇವ ಜೊತೆ ಪುನೀತ್ ಹೆಜ್ಜೆ ಹಾಕಿದ್ದಾರೆ. ಇಬ್ಬರ ಮಸ್ತ್ ಡಾನ್ಸ್ ನೋಡಲು ಅಭಿಮಾನಿಗಳು ಸಹ ಕಾತರದಿಂದ ಕಾಯುತ್ತಿದ್ದಾರೆ.
ಲಕ್ಕಿ ಮ್ಯಾನ್ ಸಿನಿಮಾಗೆ ಎಸ್ ನಾಗೇಂದ್ರ ಪ್ರಸಾದ್ ಆಕ್ಷನ್ ಕಟ್ ಹೇಳಿದ್ದಾರೆ. ಇನ್ನು ಸಿನಿಮಾದ ಟೀಸರ್ ನೋಡಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಸಹ ಇಷ್ಟಪಟ್ಟಿದ್ದಾರೆ. ಇನ್ನೇನಿದ್ರು ದೊಡ್ಡ ಪರದೆಮೇಲೆ ರಾರಾಜಿಸುವುದೊಂದೆ ಬಾರಿ ಇದೆ. ಯಾವಾಗ ರಿಲೀಸ್ ಆಗಲಿದೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.