ಹೊಸದಿಗಂತ ಡಿಜಿಟಲ್ ಡೆಸ್ಕ್;
ಭಾರತಕ್ಕೆ ಸದ್ಯದಲ್ಲಿಯೇ ಎಫ್-30 ಫೈಟರ್ ಜೆಟ್ ನೀಡಲು ಅಮೆರಿಕಾ ನಿರ್ಧಾರ ಮಾಡಿದ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಮೂಲಕ
ಭಾರತದ ವಾಯುಸೇನೆಗೆ ಭಾರೀ ಬ್ರಹ್ಮಾಸ್ತ್ರವೊಂದು ಬಂದು ಸೇರಲಿದೆ.
ಭಾರತದ ಬಳಿ ಸದ್ಯ 5ನೇ ಜನರೇಷನ್ ಅಂದ್ರೆ ಜನರೇಷನ್ 5 ಯುದ್ಧ ವಿಮಾನಗಳು ಇಲ್ಲ. ಆ ನಿಟ್ಟಿನಲ್ಲಿ ದೇಶಿಯವಾಗಿ 5ನೇ ತಲೆಮಾರಿನ ಯುದ್ಧ ವಿಮಾನವನ್ನು ಖಾಸಗಿ ಕಂಪನಿಗಳು ಸಹಭಾಗಿತ್ವದೊಂದಿಗೆ ತಯಾರಿಸಲು ಈಗಾಗಲೇ ಸಿದ್ಧತೆ ನಡೆಸಿದೆ. ಆದರೆ ಇದರ ನಡುವೆಯೇ ಟ್ರಂಪ್ ಈಗ ಖುಷಿಯ ಸುದ್ದಿಯನ್ನು ಹೇಳಿದ್ದು ಭಾರತದ ಸೇನೆಗೆ ಮತ್ತೊಂದು ದೊಡ್ಡ ಬಲ ಬಂದು ಸೇರಲಿದೆ.
ನೆರೆ ಶತ್ರುಗಳ ರಾಷ್ಟ್ರಗಳಾದ ಚೀನಾ ಹಾಗೂ ಪಾಕಿಸ್ತಾನ ಬಳಿ ಈಗ ಜನರೇಷನ್ 5ರ ಯುದ್ಧ ವಿಮಾನಗಳು ಇವೆ. ಪಾಕಿಸ್ತಾನದ ಬಳಿ ಎಪ್-16 ಇದೆ. ಇಂತಹ ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಹೊಡೆದುರುಳಿಸಲು ನಮಗೆ ಎಫ್-35 ಅತ್ಯಾಧುನಿಕ ಹಾಗೂ ಮಾರಕ ಯುದ್ಧ ವಿಮಾನಗಳ ಅವಶ್ಯಕತೆ ಇದೆ. ನಾವು ಭಾರತಕ್ಕೆ ಬಹಳಷ್ಟು ಬಿಲಿಯನ್ ಡಾಲರ್ ಮಿಲಿಟರಿ ಮಾರಾಟವನ್ನು ಹೆಚ್ಚಿಸಲಿದ್ದೇವೆ ಎಂದು ಹೇಳುವ ಮೂಲಕ ನಾವು ಅಂತಿಮವಾಗಿ ಭಾರತಕ್ಕೆ ಎಫ್ 35 ಯುದ್ಧ ವಿಮಾನವನ್ನು ನೀಡಲು ಸಿದ್ಧಗೊಂಡಿದ್ದೇವೆ ಎಂದು ಟ್ರಂಪ್ ಹೇಳೀದ್ದಾರೆ.
ಇದುವರೆಗೂ ಭಾರತ ರಷ್ಯಾದಿಂದ ಸುಖೋಯ್ ಯುದ್ಧ ವಿಮಾನ, ಫ್ರಾನ್ಸ್ನಿಂದ ರಫೇಲ್ ಖರೀದಿ ಮಾಡಿತ್ತು. ಇದರಿಂದಾಗಿ 5ನೇ ತಲೆಮಾರಿನ ಫೈಟರ್ ಜೆಟ್ ಖರೀದಿ ಮಾಡಲು ಸಾಧ್ಯವಾಗಿರಲಿಲ್ಲ. ರಷ್ಯಾ ವಿರೋಧಿಸುವ ನೆಪದಲ್ಲಿ ಅಮೆರಿಕ ಭಾರತಕ್ಕೆ ಎಫ್-16 ಮತ್ತು ಎಫ್-35 ಯುದ್ಧ ವಿಮಾನವನ್ನು ನೀಡಿರಲಿಲ್ಲ. ಈಗ ಭಾರತಕ್ಕೆ ಎಫ್-35 ಯುದ್ಧ ವಿಮಾನ ನೀಡಲು ನಿರ್ಧರಿಸಿದ ಡೋನಾಲ್ಡ್ ಟ್ರಂಪ್ ಗ್ರೀನ್ ಸಿಗ್ನಲ್ ನೀಡಿದ್ದಾರೆ.
ಸೂಪರ್ ಸಾನಿಕ್ ಸ್ಪೀಟಡ್ನಲ್ಲಿ ಸಂಚರಿಸುವ ಎಫ್-35 ರಾಡಾರ್ಗಳಿಂದಲೂ ಇದನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಅಡ್ವಾನ್ಸ್ ಎಲೆಕ್ಟ್ರಾನಿಕ್ ವಾರ್ ಫೇರ್ ಸಿಸ್ಟಮ್ ಹೊಂದಿರುವ ಎಫ್-35 ಫೈಟರ್ ಜೆಟ್, ಅತ್ಯಾಧುನಿಕ ಸೆನ್ಸರ್ಗಳು, ಅತ್ಯಾಧುನಿಕ ಕ್ಷಿಪಣಿ ತಂತ್ರಜ್ಞಾನವನ್ನು ಹೊಂದಿದೆ. ಭಾರತದ ಬತ್ತಳಿಕೆಗೆ ಈ ಒಂದು ಯುದ್ಧ ವಿಮಾನ ಬಂದು ಸೇರಿದರೆ ಭಾರತೀಯ ವಾಯುಪಡೆಗೆ ನೂರಾನೆ ಬಲ ಬರಲಿದೆ. ದೂರದಲ್ಲಿರುವ ವಿಮಾನವನ್ನು ಪತ್ತೆ ಹಚ್ಚಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ .
ಸದ್ಯ ತನ್ನ ಮಿತ್ರರಾಷ್ಟ್ರಗಳಿಗೆ ಎಫ್-35 ಫೈಟರ್ ಜೆಟ್ ಪೂರೈಸಿದೆ ಅಮೆರಿಕಾ. ಆಸ್ಟ್ರೇಲಿಯಾ, ಬ್ರಿಟನ್,ಇಟಲಿ ಹಾಗೂ ನಾರ್ವೆ ಈಗಾಗಲೇ ಎಫ್ 35 ಫೈಟರ್ ಜೆಟ್ ಹೊಂದಿವೆ.
ಜಪಾನ್, ದಕ್ಷಿಣ ಕೊರಿಯಾ, ಇಸ್ರೇಲ್ ಎಫ್ -35 ಫೈಟರ್ ಜೆಟ್ ಪೂರೈಕೆಗೆ ಈಗಾಗಲೇ ಅಮೆರಿಕಾದ ಬಳಿ ಆರ್ಡರ್ ನೀಡಿವೆ. ಅಮೆರಿಕಾದ ಈ ಆಫರ್ನ್ನು ಭಾರತ ಒಪ್ಪಿಕೊಂಡು ಎಫ್-35 ಫೈಟರ್ ಜೆಟ್ ಖರೀದಿಸಿದ್ರೆ ಮೊಲದ ನ್ಯಾಟೋಯೇತರ ರಾಷ್ಟ್ರವಾಗಲಿದೆ ಮೊದಲ ಪೆಸಿಫಿಕ್ಯೇತರ ರಾಷ್ಟ್ರ ಎಂಬ ಹೆಸರು ಗಳಿಸಲಿದೆ