ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಾರ ಬಾಯಲ್ಲೂ ನೋಡಿದ್ರೂ ಈಗ ʻಕಾಂತಾರʼ ಸಿನಿಮಾದ್ದೇ ಮಾತುಕತೆ. ಸಿನಿ ರಂಗದಲ್ಲಂತೂ ಇದರ ಹವಾ ಅಷ್ಟಿಷ್ಟಲ್ಲ. ಇನ್ನು ಕರ್ನಾಟಕ ಬಾಕ್ಸ್ ಆಫೀಸ್ ನಲ್ಲಿ ಅದ್ಭುತಗಳನ್ನು ಸೃಷ್ಟಿಸುತ್ತಿದೆ ಎಂಬ ಮಾತು ಸತ್ಯವಾಗಿದೆ. ರಿಷಬ್ ಶೆಟ್ಟಿ ನಿರ್ದೇಶನದ ಈ ಚಿತ್ರಕ್ಕೆ ಎಲ್ಲ ವರ್ಗದ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕೆಜಿಫ್ ನಿರ್ಮಾಣ ಮಾಡಿದ್ದ ‘ಹೊಂಬಾಳೆ ಫಿಲಂಸ್’ ಈ ಚಿತ್ರವನ್ನು ನಿರ್ಮಿಸಿದ್ದರೆ, ಅಲ್ಲು ಅರವಿಂದ್ ತೆಲುಗು ಥಿಯೇಟ್ರಿಕಲ್ ಹಕ್ಕನ್ನು ಪಡೆದುಕೊಂಡು ಇಂದು ಬಿಡುಗಡೆಗೆ ಸಿದ್ಧವಾಗಿದೆ.
ಸ್ಟಾರ್ ಹೀರೋಗಳೂ ಸಹ ಈ ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಇತ್ತೀಚೆಗಷ್ಟೇ ತಮಿಳಿನ ಸ್ಟಾರ್ ಹೀರೋ ಧನುಷ್ ಹಾಗೂ ಟಾಲಿವುಡ್ ಭಲ್ಲಾಳದೇವ ರಾಣಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕಾಂತಾರ ಚಿತ್ರ ಮತ್ತು ನಿರ್ಮಾಪಕರನ್ನು ಶ್ಲಾಘಿಸಿ ಪೋಸ್ಟ್ ಮಾಡಿದ್ದಾರೆ. ಮೊನ್ನೆಯಷ್ಟೇ ಕಾಂತಾರ ಸಿನಿಮಾ ಹೊಗಳಿದ್ದ ಪ್ರಭಾಸ್ ಮತ್ತೊಮ್ಮೆ ಸಿನಿಮಾ ನೋಡಿ ಪ್ರಶಂಸೆಯ ಮಳೆಯೇ ಹರಿಸಿದ್ದಾರೆ.
ʻಕಾಂತಾರ ಅದ್ಭುತ ಚಿತ್ರ. ಒಳ್ಳೆ ಕಾನ್ಸೆಪ್ಟ್ ಮತ್ತು ರೋಚಕ ಕ್ಲೈಮ್ಯಾಕ್ಸ್ ಇರುವ ಈ ಸಿನಿಮಾ ನೋಡಲೇಬೇಕು. ನಾನು ಈ ಸಿನಿಮಾವನ್ನು ಇದುವರೆಗೆ ಎರಡು ಬಾರಿ ನೋಡಿದ್ದೇನೆʼ ಎಂದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಚಿತ್ರದ ಪೋಸ್ಟರ್ ಅನ್ನು ಪೋಸ್ಟ್ ಮಾಡಿದ್ದಾರೆ. ಇದೀಗ ಈ ಚಿತ್ರ IMDb ರೇಟಿಂಗ್‌ಗಳಲ್ಲಿ “RRR” ಮತ್ತು “KGF” ಅನ್ನು ಹಿಂದಿಕ್ಕಿ 9.6 ರೇಟಿಂಗ್ ಅನ್ನು ಪಡೆದುಕೊಂಡಿದೆ.