Wednesday, November 30, 2022

Latest Posts

ಪಾಕ್ ಟಿ20 ವಿಶ್ವಕಪ್ ತಂಡದಿಂದ ಹೊರಬಿದ್ದ ಸ್ಟಾರ್‌ ಆಟಗಾರ: ಫಖರ್‌ ಜಮಾನ್‌ ಗೆ ಒಲಿದ ಅದೃಷ್ಟ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಗಾಯದಿಂದ ಇನ್ನೂ ಚೇತರಿಸಿಕೊಳ್ಳದ ಲೆಗ್ ಸ್ಪಿನ್ನರ್ ಉಸ್ಮಾನ್ ಖಾದಿರ್ ಬದಲಿಗೆ ಬ್ಯಾಟ್ಸ್‌ ಮನ್ ಫಖರ್ ಜಮಾನ್ ಮುಂಬರುವ ಟಿ20 ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಪ್ರಕಟಿಸಿದ್ದ 15 ಸದಸ್ಯರ T20 ವಿಶ್ವಕಪ್ ತಂಡದಲ್ಲಿ ಖಾದಿರ್‌ ಸ್ಥಾನ ಪಡೆದಿದ್ಆದರು. ಆದರೆ ಹೆಬ್ಬೆರಳು ಮುರಿತದಿಂದ ಅವರು ಇನ್ನೂ ಸಂಪೂರ್ಣ ಗುಣಮುಖರಾಗದ ಕಾರಣ ಖಾದಿರ್ ರನ್ನು ಮೀಸಲು ಆಟಗಾರರ ಪಟ್ಟಿಗೆ ಸೇರಿಸಲಾಗಿದೆ.
ಆದಾಗ್ಯೂ, ಖಾದಿರ್ ತಂಡದಿಂದ ಹೊರಬಿದ್ದಿರುವುದು ಬ್ಯಾಟ್ಸ್‌ಮನ್ ಫಖರ್ ಜಮಾನ್ ಪಾಲಿಗೆ ಅದೃಷ್ಟವಾಗಿ ಪರಿಣಮಿಸಿದೆ. ಗಾಯದ ಕಾರಣದಿಂದಾಗಿ ಮೀಸಲು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಫಖರ್ ಇದೀಗ ಚೇತರಿಸಿಕೊಂಡಿದ್ದು, ಮೀಸಲು ಆಟಗಾರರ ಪಟ್ಟಿಯಿಂದ ಮುಖ್ಯ ತಂಡಕ್ಕೆ ಸೇರಿಕೊಂಡಿದ್ದಾರೆ.
ಪಾಕ್‌ ಆಯ್ಕೆಗಾರರು ವಿಶ್ವಕಪ್‌ ಗೆ ಆಯ್ಕೆ ಮಾಡಿದ್ದ ತಂಡದ ಬಗ್ಗೆ ಮಾಜಿ ಆಟಗಾರರು, ಹಾಗೂ ಪಾಕ್‌ ಕ್ರೀಡಾಭಿಮಾನಿಗಳಿಂದ ತೀವ್ರ ಟೀಕೆ ವ್ಯಕ್ತವಾಗಿತ್ತು. ಪಾಕ್‌ ತಂಡ ಹಲ್ಲಿಲ್ಲದ ಹುಲಿಯಂತಾಗಿದೆ ಎಂದು ಕಿಡಿಕಾರಿದ್ದರು. ಇದೀಗ ಫಖರ್‌ ಜಮಾನ್‌ ಆಗಮನದಿಂದ ಪಾಕ್‌ ಬ್ಯಾಟಿಂಗ್‌ ವಿಭಾಗ ಕೊಂಚ ಸುಧಾರಣೆ ಕಾಣಲಿದ್ದು, ಫಖರ್‌ ಪ್ಲೇಯಿಂಗ್‌ 11 ನಲ್ಲಿ ಕಾಣಿಸಿಕೊಳ್ಳುವುದು ಖಚಿತವಾಗಿದೆ.
ದುಬೈನಲ್ಲಿ ನಡೆದ ಏಷ್ಯಾಕಪ್ ಫೈನಲ್‌ನಲ್ಲಿ ಫೀಲ್ಡಿಂಗ್ ಮಾಡುವಾಗ ಮೊಣಕಾಲು ಗಾಯಗೊಂಡ ನಂತರ ಜಮಾನ್ ಅವರು ಇಂಗ್ಲೆಂಡ್ ವಿರುದ್ಧದ ಇತ್ತೀಚಿನ ಟಿ 20  ಸರಣಿಯಿಂದ ಹೊರಗುಳಿದಿದ್ದರು. ಗಾಯಕ್ಕಾಗಿ ಪುನರ್ವಸತಿಗೆ ಒಳಗಾಗಲು ಅಫ್ರಿದಿ ಜೊತೆಗೆ ಅವರನ್ನು ಲಂಡನ್‌ಗೆ ಕಳುಹಿಸಲಾಗಿತ್ತು. ಎರಡು ಅಭ್ಯಾಸ ಪಂದ್ಯಗಳಲ್ಲಿ ಅಫ್ರಿದಿ ಅವರ ಫಿಟ್ನೆಸ್ ಅನ್ನು ಪರೀಕ್ಷಿಸಲಾಗುತ್ತದೆ.

ಪಾಕಿಸ್ತಾನ ಟಿ20 ವಿಶ್ವಕಪ್ ತಂಡ:
ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಆಸಿಫ್ ಅಲಿ, ಫಖರ್ ಜಮಾನ್, ಹೈದರ್ ಅಲಿ, ಹಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಖುಷ್ದಿಲ್ ಶಾ, ಮೊಹಮ್ಮದ್ ಹಸ್ನೇನ್, ಮೊಹಮ್ಮದ್ ನವಾಜ್, ಮೊಹಮ್ಮದ್ ರಿಜ್ವಾನ್, ಮೊಹಮ್ಮದ್ ವಾಸಿಮ್ , ನಸೀಮ್ ಶಾ, ಶಾಹೀನ್ ಶಾ ಆಫ್ರಿದಿ ಮತ್ತು ಶಾನ್ ಮಸೂದ್

ಮೀಸಲು ಆಟಗಾರರು: ಮೊಹಮ್ಮದ್ ಹ್ಯಾರಿಸ್, ಶಹನವಾಜ್ ದಹಾನಿ ಮತ್ತು ಉಸ್ಮಾನ್ ಖಾದಿರ್

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!