Tuesday, June 28, 2022

Latest Posts

ಲಕ್ಷಾಂತರ ಜನಸ್ತೋಮದ ಮಧ್ಯೆ ಮೊಳಗಿತು ಪ್ರಭು ಶ್ರೀ ರಾಮನ ಜೈ ಘೋಷ

ಹೊಸದಿಗಂತ ವರದಿ, ಕಲಬುರಗಿ:

ರಾಮ ನವಮಿ ಅಂಗವಾಗಿ ಕಲಬುರಗಿ ನಗರದಲ್ಲಿ 15 ಅಡಿ ಎತ್ತರದ ಪ್ರಭು ಶ್ರೀ ರಾಮನ ಭವ್ಯ ಮೂತಿ೯ಯ ಶೋಭಾಯಾತ್ರೆ ಯೂ ಲಕ್ಷಾಂತರ ರಾಮ ಭಕ್ತರ ಸಮ್ಮುಖದಲ್ಲಿ ಜೈ ಘೋಷಗಳೊಂದಿಗೆ ಅದ್ದೂರಿಯಾಗಿ ನೆರವೆರಿತು.

ನಗರದ ಹೊರವಲಯದ ರಾಮತೀಥ೯ ಮಂದಿರದಿಂದ ಬೆಳಿಗ್ಗೆ 11 ಗಂಟೆಗೆ ಪ್ರಾರಂಭವಾದ ಶೋಭಯಾತ್ರೆಯೂ ನಗರದ ಪ್ರಮುಖ ವೃತ್ತಗಳಿಂದ ಸಾಗಿ,ಜಗತ್ ವೃತ್ತದಲ್ಲಿ ಸಂಜೆ 8 ಗಂಟೆಗೆ ಸಂಪನ್ನಗೊಂಡಿತು.

ಇನ್ನೂ ಜೇವರ್ಗಿ ರಸ್ತೆಯ ರಾಮ ಮಂದಿರದಲ್ಲಿ ರಾಮೋತ್ಸವ ವೈಭದಿಮದ ಆಚರಿಸಲಾಯಿತು. ಪಂಡಿತರಿಂದ ಪ್ರವಚನ, ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಭಾನುವಾರ ಬೆಳಗ್ಗೆ ಶ್ರೀ ರಾಮನಿಗೆ ವಿಶೇಷ ಪೂಜೆ, ಪುಷ್ಪಾಂಲಂಕಾರ, ರಾಜ ಜನನ ತೊಟ್ಟಿಲೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಾಮನ ದರ್ಶನ ಕ್ಕೆ ಅಪಾರ ಪ್ರಮಾಣದಲ್ಲಿ ಭಕ್ತರು ಆಗಮಿಸಿ ದರ್ಶನ ಪಡೆದುಕೊಂಡರು. ಎಲ್ಲ ಭಕ್ತರಿಗೂ ಮಂದಿರದ ವತಿಯಿಂದ ಕೋಸಂಬರಿ, ಪಾನಕ ನೀಡಲಾಯಿತು. ಹಾಗೂ ತಂಪಾದ ಕುಡಿಯುವ ನೀಎಇನ ವ್ಯವಸ್ಥೆ ಕಲ್ಪಿಸಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss