ಹೊಸದಿಗಂತ ಡಿಜಿಟಲ್ ಡೆಸ್ಕ್:
ವಯೋ ಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ನಟ ಪ್ರಭುದೇವ ಅವರ ಅಜ್ಜಿ ಪುಟ್ಟಮ್ಮಣ್ಣಿ (96) ಜು.9ರ ರಾತ್ರಿ ಕೊನೆಯುಸಿರೆಳೆದಿದ್ದಾರೆ.
ಪ್ರಭುದೇವ ತಾಯಿ ಅವರ ತಾಯಿ ಪುಟ್ಟಮ್ಮಣ್ಣಿ ನಂಜನಗೂಡು ತಾಲ್ಲೂಕಿನ ದೂರ ಗ್ರಾಮದಲ್ಲಿ ಕಳೆದ ರಾತ್ರಿ ನಿಧನರಾಗಿದ್ದಾರೆ. ಅಜ್ಜಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಇಂದು ಮೈಸೂರಿಗೆ ಪ್ರಭುದೇವ ಹಾಗೂ ಸಹೋದರ ನಾಗೇಂದ್ರ ಆಗಮಿಸಿದ್ದಾರೆ.
ಅಜ್ಜಿಯ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಪ್ರಭುದೇವ ಅವರು ಚೆನ್ನೈ ನಿಂದ ಮೈಸೂರಿಗೆ ಆಗಮಿಸಿದ್ದಾರೆ. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಇಂದು ಸಂಜೆ ಅಂತ್ಯಕ್ರಿಯೆ ನಡೆಯಲಿದೆ.