ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಯಿಂದ ಊಟ, ಬಟ್ಟೆ, ಚಮಚ, ಪುಸ್ತಕಗಳ ನಿರೀಕ್ಷೆ ಇಟ್ಟುಕೊಂಡು ಹೈಕೋರ್ಟ್ ಕಡೆ ಮುಖಮಾಡಿದ್ದ ನಟ ದರ್ಶನ್‌ಗೆ ಮತ್ತೆ ಜು.18ರವರೆಗೂ ಜೈಲೂಟವೇ ಗತಿ.
ಹೌದು, ಸದ್ಯ ರೇಣುಕಾಸ್ವಾಮಿ ಮರ್ಡರ್ ಕೇಸ್‌ನಲ್ಲಿ ದರ್ಶನ್ ಜೈಲಿನಲ್ಲಿದ್ದಾರೆ. ಜೈಲಿನ ಊಟ ತಿಂದು ತೂಕ ಕಳೆದುಕೊಳ್ತಿರೋ ದರ್ಶನ್ ಮನೆಯಿಂದ ಊಟ ಕಳಿಸಿ ಎಂದು ಹೈಕೋರ್ಟ್ ಬಳಿ ಮನವಿ ಮಾಡಿದ್ರು. ಇದರ ವಿಚಾರಣೆ ನಡೆದಿದ್ದು, ಎಲ್ಲ ಪ್ರಕರಣಗಳ ರೀತಿಯೇ ಇದನ್ನೂ ಕನ್ಸಿಡರ್ ಮಾಡಿರು ಕೋರ್ಟ್ ಕಾಯುವಂತೆ ಹೇಳಿದೆ.
ಹೈಕೋರ್ಟ್ನ ಏಕಸದಸ್ಯ ಪೀಠದಲ್ಲಿ ವಿಚಾರಣೆ ನಡೆದಿದ್ದು, ನ್ಯಾಯಮೂರ್ತಿ ಎಸ್.ಆರ್.ಕೃಷ್ಣಕುಮಾರ್ ನೇತೃತ್ವದ ಪೀಠದಲ್ಲಿ ನಡೆದ ವಿಚಾರಣೆಯಲ್ಲಿ ದರ್ಶನ್ ಪರ ಹಿರಿಯ ವಕೀಲರಾದ ಕೆ.ಎನ್.ಫಣೀಂದ್ರ ವಾದ ಮಂಡಿಸಿದರು. ವಾದ ಆರಂಭ ಆಗ್ತಿದ್ದಂತೆಯೇ ಕೋರ್ಟ್, ಜೈಲು ನಿಯಮಗಳನ್ನು ತೋರಿಸುವಂತೆ ಹೇಳಿತು. ಜೈಲಿನ ಮಾರ್ಗಸೂಚಿ ನೀಡುವಂತೆ ದರ್ಶನ್ ಪರ ವಕೀಲರಿಗೆ ಹೈಕೋರ್ಟ್ ಸೂಚನೆ ನೀಡಿತು.
ಜೈಲಿನಲ್ಲಿರುವ ಪರಿಷ್ಕರಣೆ ನಿಯಮ ಎಂದು ಇದೆಯಲ್ವಾ? ಅದನ್ನು ಮೊದಲು ನಮಗೆ ತೋರಿಸಿ. ಆ ನಿಯಮಗಳನ್ನು ತೋರಿಸಿದ್ರೆ ಆದೇಶ ನೀಡಬಹುದು. ಅಲ್ಲದೇ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಬೇಕು. ಆ ನಂತರ ನಾವು ಆದೇಶವನ್ನು ಮಾಡಬಹುದು ಎಂದು ನ್ಯಾಯಮೂರ್ತಿ ಕೃಷ್ಣ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಸ್ಗೆ ಸಂಬಂಧಿಸಿದ ಎಲ್ಲಾ ನಿಬಂಧನೆಗಳನ್ನ ಒಟ್ಟಿಗೆ ಮಾಡಿ ಸಲ್ಲಿಸಬೇಕು. ಜೈಲು ಅಧಿಕಾರಿಗಳಿಗೆ ಕೋರಿಕೆ ಸಲ್ಲಿಸಲಾಗಿದೆಯಾ? ವಿಚಾರಣಾಧೀನ ಕೋರ್ಟ್ನಲ್ಲಿ ಈ ಕೋರಿಕೆ ಸಲ್ಲಿಸಲಾಗಿದೆಯಾ? ಅದಕ್ಕೂ ಸಹ ಉತ್ತರ ನೀಡಬೇಕು ಎಂದು ದರ್ಶನ್ ಪರ ವಕೀಲ ಫಣೀಂದ್ರ ಅವರಿಗೆ ಹೈಕೋರ್ಟ್ ಸೂಚನೆ ನೀಡಿತು. ಬಳಿಕ ಅರ್ಜಿ ವಿಚಾರಣೆಯನ್ನು ಜುಲೈ 18ಕ್ಕೆ ವಿಚಾರಣೆನ್ನು ಮುಂದೂಡಿತು. ಈ ಮೂಲಕ ಜುಲೈ 18ರ ತನಕ ದರ್ಶನ್‌ಗೆ ಮನೆ ಊಟ, ಬಟ್ಟೆ, ಚಮಚ ಮತ್ತು ಪುಸ್ತಕ ಸಿಗಲ್ಲ.