ಹೊಸದಿಗಂತ ಡಿಜಿಟಲ್ ಡೆಸ್ಕ್:
ಸೆ.4 ರಂದು ಚಂದ್ರನ ಮೇಲಿರುವ ಪ್ರಗ್ಯಾನ್ ರೋವರ್ ಹಾಗೂ ವಿಕ್ರಮ್ ಲ್ಯಾಂಡರ್ ನಿದ್ದಿಗೆ ಜಾರಿದೆ.ಇದಕ್ಕೂ ಮುನ್ನ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿದಿರುವ ವಿಕ್ರಮ್ ಲ್ಯಾಂಡರ್ನ ಮೊದಲ 3-ಡಿ ಚಿತ್ರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಂಗಳವಾರ ಬಿಡುಗಡೆ ಮಾಡಿದೆ.
ಈ ಚಿತ್ರವನ್ನು ಪ್ರಜ್ಞಾನ್ ರೋವರ್ ಆಗಸ್ಟ್ 30 ರಂದು ಸೆರೆಹಿಡಿದಿತ್ತು.
ಇದು ತ್ರಿ ಡೈಮೆನ್ಶನಲ್ ಫೋಟೋ ಆಗಿದೆ. ಈ ಚಿತ್ರವನ್ನು ವೀಕ್ಷಿಸಲು ಇಸ್ರೋ ಮಹತ್ವದ ಸೂಚನೆಯನೊಂದನ್ನು ನೀಡಿದೆ. ಬರಿಗಣ್ಣಿನಿಂದ ನೋಡಿದರೆ ಈ ಚಿತ್ರದಲ್ಲಿನ ವಿಶೇಷತೆ ಹಾಗೂ ಸೂಕ್ಷ್ಮತೆ ಅರಿಯಲು ಸಾಧ್ಯವಿಲ್ಲ.
ಅನಾಗ್ಲಿಫ್ ಸ್ಟಿರಿಯೊ ಮೂರು ಆಯಾಮಗಳಲ್ಲಿ ಚಿತ್ರವನ್ನು ಸೆರೆಹಿಡಿಯಲಾಗಿದೆ. ಇದು ವಸ್ತು ಅಥವಾ ಭೂಪ್ರದೇಶದ ಸರಳ ದೃಶ್ಯವಾಗಿದೆ. ಇಲ್ಲಿರುವ ಲ್ಯಾಂಡರ್ನ ಚಿತ್ರವನ್ನು NavCam ಸ್ಟಿರಿಯೊ ಬಳಸಿ ರೂಪಿಸಲಾಗಿದೆ. ಇದು ಪ್ರಗ್ಯಾನ್ ರೋವರ್ ಸೆರೆಹಿಡಿದಿರುವ ಎಡ ಮತ್ತು ಬಲ ಚಿತ್ರಗಳಾಗಿವೆ. ಮೂರು ಕೋನಗಳಲ್ಲಿನ ಎಡ ಚಿತ್ರವು ಕೆಂಪು ಬಣ್ಣ ಉಂಟು ಮಾಡಿದರೆ, ಬಲ ಚಿತ್ರವು ನೀಲಿ ಮತ್ತು ಹಸಿರಿನಿಂದ ಕೂಡಿದೆ. ಈ ಎರಡು ಚಿತ್ರಗಳೂ ಸ್ಟಿರಿಯೊ ಪರಿಣಾಮಕ್ಕೆ ಕಾರಣವಾಗಿದೆ. ಇದು ಲ್ಯಾಂಡರ್ ಚಿತ್ರವು 3 ಡಿಯಲ್ಲಿ ಕಾಣುವಂತೆ ಮಾಡುತ್ತದೆ ಎಂದು ಇಸ್ರೋ ಬರೆದುಕೊಂಡಿದೆ.
ನ್ಯಾವಿಕ್ಯಾಮ್ ಅನ್ನು ಎಲ್ಇಒಎಸ್ ಮತ್ತು ಇಸ್ರೋ ಜಂಟಿಯಾಗಿ ರೂಪಿಸಿದೆ. ಅದನ್ನು ಎಸ್ಎಸಿ ಮತ್ತು ಇಸ್ರೋ ಕೂಡಿಕೊಂಡು ಮಾಹಿತಿಯನ್ನು ವಿಶ್ಲೇಷಣೆ ಮಾಡುತ್ತವೆ. ಇಲ್ಲಿಯವರೆಗೂ ನ್ಯಾವಿಕ್ಯಾಮ್ ಚಂದ್ರನ ಹಲವಾರು ಚಿತ್ರಗಳನ್ನು ಭೂಮಿಗೆ ರವಾನಿಸಿದೆ ಎಂದು ಇಸ್ರೋ ತಿಳಿಸಿದೆ.
ಚಂದ್ರನಲ್ಲಿ 1 ದಿನವೆಂದರೆ ಭೂಮಿಯ 28 ದಿನಗಳಿಗೆ (655 ಗಂಟೆ) ಸಮ. ಒಂದು ಹಗಲು ಎಂದರೆ 14 ದಿನ. ಒಂದು ರಾತ್ರಿ ಎಂದರೆ 14 ದಿನ. ಆಗಸ್ಟ್ 23 ರಂದು ಚಂದ್ರನ ಸಮಯದ ಪ್ರಕಾರ ಬೆಳಗ್ಗೆ ಲ್ಯಾಂಡ್ ಆಗಿತ್ತು. ಇದೀಗ ಸೆಪ್ಟೆಂಬರ್ 4 ರ ಸಂಜೆ ಲ್ಯಾಂಡರ್, ರೋವರ್ ಸ್ಲೀಪ್ ಮೂಡ್‌ಗೆ ಜಾರಿದೆ.ಸೆಪ್ಟೆಂಬರ್ 2 ರಂದು ಪ್ರಗ್ಯಾನ್ ರೋವರ್ ಸ್ಲೀಪ್ ಮೂಡ್‌ಗೆ ಜಾರಿದ್ದರೆ, ಸೆ.4 ರಂದು ಲ್ಯಾಂಡರ್ ಸ್ಲೀಪ್ ಮೂಡ್‌ಗೆ ಜಾರಿದೆ. ಇನ್ನು ಸೆ.22ರಂದು ಮತ್ತೆ ಬಿಸಿಲು ಬಂದಾಗ ಇವುಗಳು ಕೆಲಸ ಆರಂಭಿಸಬಹುದು ಅನ್ನೋ ವಿಶ್ವಾಸ ಇಸ್ರೋದಲ್ಲಿದೆ.