ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಜ್ವಲ್ ರೇವಣ್ಣರನ್ನು ವಿಮಾನ ನಿಲ್ದಾಣದಲ್ಲಿಯೇ ಅರೆಸ್ಟ್ ಮಾಡಲಾಗುತ್ತದೆ, ಇದಕ್ಕೆ ಎಲ್ಲ ತಯಾರಿಯನ್ನು ಎಸ್‌ಐಟಿ ಮಾಡಿಕೊಂಡಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಜ್ವಲ್‍ರನ್ನು ಏರ್‌ಪೋರ್ಟ್‌ನಲ್ಲೇ ವಶಕ್ಕೆ ಪಡೆಯಲು ಈಗಾಗಲೇ ವಾರೆಂಟ್ ಜಾರಿಯಾಗಿದೆ. ಬಳಿಕ ಕಾನೂನು ಪ್ರಕಾರ ಅವರನ್ನು ವಿಚಾರಣೆ ನಡೆಸಲಾಗುತ್ತದೆ. ಪ್ರಜ್ವಲ್ ವಾಪಸ್ ಆಗುವ ಹಿನ್ನೆಲೆಯಲ್ಲಿ ಎಸ್‍ಐಟಿ ಎಲ್ಲಾ ತಯಾರಿ ಮಾಡಿಕೊಂಡಿದೆ. ಬೇರೆ ದೇಶಕ್ಕೆ ಹೋಗಿ ನಾವು ಅರೆಸ್ಟ್ ಮಾಡುವಂತಿಲ್ಲ. ಏರ್‌ಪೋರ್ಟ್‌ನಲ್ಲೇ ಬಂಧನ ಆಗಬೇಕು ಎಂದಿದ್ದಾರೆ.