ಪ್ರಜ್ವಲ್ ರೇವಣ್ಣನ ನಡವಳಿಕೆ ಸರಿಯಿಲ್ಲ, ಇಂಗ್ಲೆಂಡ್​​​ ನಲ್ಲಿ ಒಂದ್ಸಲ ಸಿಕ್ಕಿಬಿದ್ದಿದ್ರು: ಶಿವರಾಮೇಗೌಡ ಅಚ್ಚರಿ ಹೇಳಿಕೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣ ದೇಶಾದ್ಯಂತ ಸುದ್ದಿ ಮಾಡಿದೆ. ಈ ನಿಟ್ಟಿನಲ್ಲಿ ಎಸ್ ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಸಂತ್ರಸ್ತರಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ಇದೀಗ ಜೆಡಿಎಸ್‌ನ ಮಾಜಿ ಸಂಸದ ಎಲ್‌ಆರ್‌ ಶಿವರಾಮೇಗೌಡ ಹೇಳಿಕೆ ನೀಡಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪೆನ್ ಡ್ರೈ ಪ್ರಕರಣದ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಗ ಇಂತಹ ಹೇಯ ಕೃತ್ಯ ಎಸಗಿದಾಗ ಅಪ್ಪ-ಅಮ್ಮ ಏನು ಮಾಡ್ತಿದ್ರು ? ಎಂದು ಶಿವರಾಮೇಗೌಡ ಹೇಳಿದರು. ಅದೂ ಅಲ್ಲದೆ ರೇವಣ್ಣ ಅಷ್ಟೊಂದು ಸಂಸ್ಕಾರವಂತರಲ್ಲ, ನಾನು ಇಂಗ್ಲೆಂಡಿಗೆ ಹೋದಾಗ ರೇವಣ್ಣ ಅಲ್ಲಿ ಸಿಕ್ಕಿಹಾಕಿಕೊಂಡಿದ್ದರು ಎಂದು ತಿಳಿಸಿದ್ದಾರೆ.

ಹಾಸನದಲ್ಲಿ ನಡೆದ ಘಟನೆಯೇ ಆ ದಿನ ಇಂಗ್ಲೆಂಡ್‌ನಲ್ಲೂ ನಡೆದಿದೆ ಎಂದು ಶಿವರಾಮೇಗೌಡ ಹೇಳಿದರು. ಸದ್ಯ ಆರೋಪಿ ಎ1 ಜೆಡಿಎಸ್ ಶಾಸಕ ಹೆಚ್.ಡಿ.ರೇವಣ್ಣ ಅವರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!