Wednesday, March 29, 2023

Latest Posts

ಪ್ರಕಾಶ್ ರೈ ಅರ್ಬನ್ ನಕ್ಸಲ್: ವಿವೇಕ್ ಅಗ್ನಿಹೋತ್ರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ದಿ ಕಾಶ್ಮೀರ್ ಫೈಲ್ಸ್ (The Kashmir Files)ಸಿನಿಮಾದ ಕುರಿತು ಟೀಕಿಸಿದ ನಟ ಪ್ರಕಾಶ್ ರೈ (Prakash Rai) ಅವರನ್ನು ನಿರ್ದೇಶಕ ವಿವೇಕ್ ಅಗ್ನಿಹೋತ್ರಿ (Vivek Agnihotri) ಅರ್ಬನ್ ನಕ್ಸಲ್ (Urban Naxal) ಎಂದು ಕರೆದಿದ್ದಾರೆ.

ಪ್ರಕಾಶ್ ರೈ ದಿ ಕಾಶ್ಮೀರ್ ಫೈಲ್ಸ್ ಸಿನಿಮಾವನ್ನೂ ಟೀಕಿಸಿದ್ದರು. ಭಾಸ್ಕರ್ ಪ್ರಶಸ್ತಿಯನ್ನೂ ಪಡೆಯದವರು ಆಸ್ಕರ್ ಪ್ರಶಸ್ತಿ ಕೇಳುತ್ತಿದ್ದಾರೆ ಎಂದು ಪರೋಕ್ಷವಾಗಿ ವಿವೇಕ್ ಅಗ್ನಿಹೋತ್ರಿಯನ್ನು ಕಾಲೆಳೆದಿದ್ದರು. ಸಿನಿಮಾವನ್ನು ಅಂತಾರಾಷ್ಟ್ರೀಯ ಜ್ಯೂರಿಗಳು ತೆಗಳಿದ್ದರು ಎಂದು ನೆನಪಿಸಿದ್ದರು. ಪಠಾಣ್ ಸಿನಿಮಾ 700 ಕೋಟಿ ಸಂಪಾದಿಸಿದೆ. ಕೆಲವರು ಈ ಸಿನಿಮಾವನ್ನು ಬ್ಯಾನ್ ಮಾಡಲು ಹೊರಟಿದ್ದರು.
ಮೂರ್ಖರು, ಮತಾಂಧರು ಪಠಾಣ್ ಸಿನಿಮಾಗೆ ತೊಂದರೆ ಕೊಟ್ಟರು. ಮೋದಿ (Modi) ಸಿನಿಮಾ 30 ಕೋಟಿಯೂ ಕಲೆಕ್ಷನ್ ಮಾಡಲಿಲ್ಲ. ಅವರು ಬೊಗಳುತ್ತಾರೆ ಕಚ್ಚುವುದಿಲ್ಲ’ ಎಂದು ಟೀಕೆ ಮಾಡಿದ್ದರು.

ಹೀಗಾಗಿ ಅಗ್ನಿಹೋತ್ರಿ ಮತ್ತೆ ಪ್ರಕಾಶ್ ರೈಗೆ ತಿರುಗೇಟು ನೀಡಿದ್ದಾರೆ. ‘ಅರ್ಬನ್ ನಕ್ಸಲ್ ಗಳ ನಿದ್ದೆ ಕೆಡಿಸಿದೆ ದಿ ಕಾಶ್ಮೀರ್ ಫೈಲ್ಸ್ ಸಿನಿಮಾ. ಚಿತ್ರವು ಬಿಡುಗಡೆಯಾಗಿ ಒಂದು ವರ್ಷ ಕಳೆದರೂ, ಓರ್ವ ವ್ಯಕ್ತಿಯ ನಿದ್ದೆ ಕೆಡಿಸಿದೆ ಆ ಸಿನಿಮಾ. ಭಾಸ್ಕರ್ ಪ್ರಶಸ್ತಿಯು ನಿಮ್ಮ ಬಳಿಯೇ ಇರುವಾಗ ಅದನ್ನು ನಾನು ಪಡೆಯಲು ಸಾಧ್ಯವಿಲ್ಲ’ ಎಂದು ವ್ಯಂಗ್ಯವಾಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!