ಚಂದ್ರಯಾನ 3 ಯಶಸ್ವಿಗೆ ಪ್ರಕಾಶ್‌ ರಾಜ್ ಅಭಿನಂದನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಂದ್ರಯಾನ 3 ಯಶಸ್ವಿಯಾಗಿದ್ದು, ದೇಶ ವಿದೇಶದಿಂದ ಭಾರತಕ್ಕೆ ಅಭಿನಂದನೆ ಹರಿದು ಬರುತ್ತಿದೆ.

ಈ ನಡುವೆ ಕೆಲ ದಿನಗಳ ಹಿಂದೆ ಟ್ವಿಟ್‌ ಮಾಡಿದ್ದ ವಿವಾದಕ್ಕೆ ಈಡಾಗಿದ್ದ ನಟ ಪ್ರಕಾಶ್‌ ರಾಜ್ ಅವರು ಗ ಮತ್ತೊಂದು ಟ್ವಿಟ್‌ ಮಾಡಿದ್ದು, ಅದರಲ್ಲಿ, ಭಾರತದ..ಮನುಕುಲದ ಹೆಮ್ಮೆಯ ಕ್ಷಣಗಳಿವು .. ಧನ್ಯವಾದಗಳು #ISRO #Chandrayaan3 #VikramLander ಮತ್ತು ಇದನ್ನು ಸಾಧ್ಯವಾಗಿಸಿದ ಎಲ್ಲರಿಗೂ .. ವಿಶಾಲ ವಿಶ್ವದ ಇನ್ನಷ್ಟು ವಿಸ್ಮಯಗಳನ್ನು ಅರಿಯಲು, ಸಂಭ್ರಮಿಸಲು , ಇದು ದಾರಿಯಾಗಲಿ ಎಂದು ಬರೆದುಕೊಂಡಿದ್ದಾರೆ.

ಈ ಮೊದಲು ಪ್ರಕಾಶ್ ರಾಜ್ ಮಾಡಿದ ಟ್ವೀಟ್ ಭಾರೀ ಚರ್ಚೆಯಲ್ಲಿದ್ದರು.. ಪ್ರಕಾಶ್ ರಾಜ್ ಚಂದ್ರನಿಂದ ಬಂದ ಮೊದಲ ಚಿತ್ರ ಎಂದು ವಿರೂಪಗೊಳಿಸಿದ ಚಾಯ್ ವಾಲಾನ ಫೋಟೋ ಹಂಚಿಕೊಂಡಿದ್ದರು. ಇದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!