ಮೋದಿಯವರನ್ನು ಹೊಗಳಿದ ಹೀರೋ ವಿಶಾಲ್: ಪ್ರಕಾಶ್ ರಾಜ್ ಕೌಂಟರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಹುಭಾಷಾ ನಟ ಪ್ರಕಾಶ್ ರಾಜ್ ದಕ್ಷಿಣ ಸಿನಿರಂಗ ಮತ್ತು ಬಾಲಿವುಡ್‌ನಲ್ಲಿ ಕೂಡಾ ತಮ್ಮ ನಟನೆಯಿಂದ ಅಭಿಮಾನಿಗಳನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಸದಾ ರಾಜಕೀಯದ ಬಗ್ಗೆ ಒಂದಿಲ್ಲೊಂದು ಕಮೆಂಟ್ ಮಾಡುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಹಲವು ಬಾರಿ ವಿವಾದಗಳಲ್ಲಿ ಸಹ ಸಿಲುಕಿಕೊಂಡಿದ್ದಾರೆ. ಹೆಚ್ಚಾಗಿ ಬಿಜೆಪಿಯನ್ನು ಕೆಣಕುವಲ್ಲಿ ತಮ್ಮದೇ ಆದ ವಿಶೇಷ ತಂತ್ರ ಅನುಸರಿಸುತ್ತಿದ್ದಾರೆ. ‘ಜಸ್ಟ್ ಆಸ್ಕಿಂಗ್’ ಎಂಬ ಹ್ಯಾಷ್ ಟ್ಯಾಗ್ ಮೂಲಕ ಮೋದಿ ಸರ್ಕಾರವನ್ನು ಕಾಲಕಾಲಕ್ಕೆ ಟೀಕೆ ಮಾಡುವುದೇ ಇವರ ಕೆಲಸವಾಗಿದೆ.

ಇತ್ತೀಚೆಗಷ್ಟೇ ತಮಿಳಿನ ಯಂಗ್ ಹೀರೋ ವಿಶಾಲ್ ಮಾಡಿದ್ದ ಕಾಮೆಂಟ್ ಗೆ ಪ್ರಕಾಶ್ ರಾಜ್ ವಿಡಂಬನಾತ್ಮಕ ಕೌಂಟರ್ ನೀಡಿದ್ದಾರೆ. ಕಾಶಿಗೆ ಭೇಟಿ ನೀಡಿದ್ದ ವಿಶಾಲ್, ಅಲ್ಲಿ ನಡೆಯುತ್ತಿರುವ ಅಭಿವೃದ್ಧಿ ನೋಡಿ ಅಚ್ಚರಿಯಾಯಿತು. ಮೋದಿ ಸರ್ಕಾರ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳಿಗೆ ನಾನು ವೀರಾಭಿಮಾನಿಯಾದೆ ಎಂದು ವಿಶಾಲ್‌ ಹೇಳಿದರು. ವಿಶಾಲ್ ಅವರ ಮಾತಿಗೆ ಪ್ರಕಾಶ್ ರಾಜ್ ‘ಶಾಟ್ ಓಕೆ..ಮುಂದೆ..?’ ಎಂದು ಪ್ರಕಾಶ್‌ ರಾಜ್ ಕೌಂಟರ್‌ ಕೊಟ್ಟಿದ್ದಾರೆ.

ಮೋದಿ ಸರ್ಕಾರದ ವಿರುದ್ಧ ವಿಶಾಲ್ ಮೆಚ್ಚುಗೆಗೆ ಸಂಬಂಧಿಸಿದಂತೆ ಶಾಟ್ ಓಕೆ.. ಮುಂದೇನು ಮಾಡಲಿದ್ದಾರೆ ಎಂದು ವಿಶಾಲ್ ವಿರುದ್ಧ ಪ್ರಕಾಶ್ ರಾಜ್ ಸಿಟ್ಟಿಗೆದ್ದರು. ಸದ್ಯ ಇವರಿಬ್ಬರ ನಡುವೆ ನಡೆಯುತ್ತಿರುವ ಈ ಟ್ವೀಟ್ ವಾರ್ ಗೆ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಪ್ರತಿ ಬಾರಿಯೂ ಮೋದಿ ವಿರುದ್ಧ ಪ್ರಕಾಶ್ ರಾಜ್ ಟೀಕೆ ಮಾಡುವ ಕೆಲಸದಲ್ಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ನಟನನ್ನು ಟೀಕಿಸುತ್ತಿದ್ದಾರೆ. ಇನ್ನು ಕೆಲವರು ಪ್ರಕಾಶ್ ರಾಜ್ ಪರ ಕಾಮೆಂಟ್ ಮಾಡುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!