ಕುಟುಂಬದವರ ಜೊತೆ ಆಗಮಿಸಿ ಮತದಾನದ ಮಾಡಿದ ಪ್ರಲ್ಹಾದ ಜೋಶಿ

ದಿಗಂತ ವರದಿ ಹುಬ್ಬಳ್ಳಿ:

ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ ಜೋಶಿ ಅವರು ಮಂಗಳವಾರ ಇಲ್ಲಿಯ ಭವಾನಿ‌ನಗರದ ಚಿನ್ಮಯ ವಿದ್ಯಾಲಯ ಆಗಮಿಸಿ ಕುಟುಂಬ ಪರಿವಾರದೊಂದಿಗೆ ಮತ ಚಲಾಯಿಸಿದರು.
ಪತ್ನಿ ಜ್ಯೋತಿ, ಸಹೋದರ ಗೋವಿಂದ ಜೋಶಿ, ಅವರ ಪತ್ನಿ ಹಾಗೂ ಪ್ರಹ್ಲಾದ ಜೋಶಿ ಅವರ ಪುತ್ರಿಯರು ಇದ್ದರು.

ಬಳಿಕ ಮಾತನಾಡಿದ ಅವರು, ಚುನಾವಣೆ ಪ್ರಜಾಪ್ರಭುತ್ವದ ಹಬ್ಬವಾಗಿದೆ. ಭಾರತದ ಭವಿಷ್ಯವನ್ನು ನಿರ್ಧರಿಸುವ ಅವಕಾಶ ಮತದಾರಿಗೆ ಇದೆ. ಸದ್ಯ ಮತದಾರರಲ್ಲಿ ಉತ್ಸಾಹ ನೋಡಿದರೆ ದೇಶಕ್ಕೆ ಮೂರನೇ ಬಾರಿ ಮೋದಿ ಅವರ ಆಯ್ಕೆ ಮಾಡಲು ಜನರು ನಿರ್ಧರಿಸಿದಂತೆ ಕಾಣುತ್ತಿದೆ ಎಂದರು.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಾನು ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದೆ. ಈ ಬಾರಿಯೂ ಅತೀ ಹೆಚ್ಚು ಮತಗಳು ಅಂತರದಿಂದ‌ ಗೆಲ್ಲುತ್ತೇನೆ ಎಂದು ಭರವಸೆ ವ್ಯಕ್ತಪಡಿಸಿದರು.
ಪ್ರತಿ ಚುನಾವಣೆಯಲ್ಲಿ ನನ್ನ ತೇಜ್ಯೋವಧೆ ಮಾಡುವುದು ಸಾಮಾನ್ಯ. ಆದರೆ ನಾನು ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳು ನನ್ನ ಕೈ ಹಿಡಿಯಲಿವೆ. ಆ ಬಗ್ಗೆ ನಾನು ಹೆಚ್ಚು ತಲೆ ಕೆಡಿಸಿಕೊಳ್ಳಲ್ಲ ಎಂದು ಹೇಳಿದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!