ಭರ್ಜರಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದ ಪ್ರಲ್ಹಾದ ಜೋಶಿ

ದಿಗಂತ ವರದಿ ಧಾರವಾಡ:

ಧಾರವಾಡ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ನಾಮಪತ್ರ ಸಲ್ಲಿಕೆ ಹಿನ್ನಲೆ ಭವ್ಯ ಮೆರವಣಿಗೆ ಸೋಮವಾರ ನಡೆಯಿತು.

ಮುರುಘಾಮಠಕ್ಕೆ ಭೇಟಿ ನೀಡಿದ ಜೋಶಿ, ಮೃತ್ಯುಂಜಯ ಶ್ರೀಗಳ ಹಾಗೂ ಮಹಾಂತಪ್ಪ ಶ್ರೀಗಳ ಗದ್ದುಗೆ ದರ್ಶನ ಪಡೆದರು. ಬಳಿಕ ಶಿವಾಜಿ ವೃತ್ತಕ್ಕೆ ಬಂದು ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಗೆ ಮಾರ್ಲಾಪಣೆ ಬಳಿಕ ಮೆರವಣಿಗೆ ಪ್ರಾರಂಭಗೊಂಡಿತು.

ಶಿವಾಜಿ ವೃತ್ತದಿಂದ ಆರಂಭಗೊಂಡ ಬೃಹತ್ ಮೆರಣಿಗೆಯಲ್ಲಿ ಜನಸ್ತೋಮ, ಕಲಾ ತಂಡಗಳ ಮೆರಗು, ಕೇಸರಿ ಹಾಗೂ ಜೆಡಿಎಸ್ ಧ್ವಜಗಳ ಹಾರಾಟದ ಜತೆ ಕೇಸರಿಮಯ ವಾತಾವರಣ ಕಾಣಿಸಿತು.

ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಪ್ರಹ್ಲಾದ್ ಜೋಶಿ ಭಾವಚಿತ್ರಗಳ ಮೆರಗು, ಹೆಗಲ ಮೇಲೆ ಕೇಸರಿ ವಸ್ತ್ರಗಳು ರಾರಾಜಿಸಿದವು.

ಪ್ರಹ್ಲಾದ ಜೋಶಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಸಂಸದ ವಿಜಯ ಸಂಕ್ಷೇಶ್ಚರ, ಮಾಜಿ ಸಚಿವರಾದ ಹಾಲಪ್ಪ ಆಚಾರ, ಸಿ.ಸಿ.ಪಾಟೀಲ, ಭೈರತಿ ಬಸವರಾಜ, ಶಾಸಕ ಅರವಿಂದ ಬೆಲ್ಲದ, ಮಹೇಶ ಟೆಂಗಿನಕಾಯಿ, ಪ್ರದೀಪ ಶೆಟ್ಟರ್, ಎಸ.ವಿ.ಸಂಕನೂರ, ಮಾಜಿ ಶಾಸಕರಾದ ಸೀಮಾ ಮಸೂತಿ, ಅಮೃತ ದೇಸಾಯಿ, ಜೆಡಿಎಸ್ ಜಿಲ್ಲಾಧ್ಯಕ್ಷ ಗುರುರಾಜ ಹುಣಸೀಮರದ ಸಾಥ್ ನೀಡಿದರು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!