ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಯೋಧ್ಯೆ ರಾಮಮಂದಿರದಲ್ಲಿ ರಾಮಲಲಾ ಪ್ರತಿಷ್ಠಾಪನೆಯ ಮೊದಲ ವಾರ್ಷಿಕೋತ್ಸವ ಸಂಭ್ರಮ ಮನೆ ಮಾಡಿದೆ.
ಪ್ರತಿಷ್ಠಾ ದ್ವಾದಶಿಯಂದು ಬಾಲರಾಮಮೂರ್ತಿಗೆ ಮಹಾ ಅಭಿಷೇಕ ಮಾಡಲಾಯಿತು. ನಂತರ ಅವರ ಮಂಗಲ ದರುಶನ ನಡೆಯಿತು.
ವಿಶೇಷ ದಿನದಂದು ರಾಮಮಂದಿರವನ್ನು ಭವ್ಯವಾಗಿ ಅಲಂಕರಿಸಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ರಾಮಲಲಾನ ದರುಶನ ಪಡೆದರು.
ಅಯೋಧ್ಯೆಯಲ್ಲಿ ಹಬ್ಬದ ವಾತಾವರಣವೇ ಇತ್ತು. ಭಕ್ತರು ನೃತ್ಯ ಮಾಡುತ್ತಾ ಮತ್ತು ಹಾಡುತ್ತ ಮೆರವಣಿಗೆ ಸಾಗಿ ಶ್ರೀರಾಮನ ಭಕ್ತಿಯಲ್ಲಿ ಮಿಂದೆದ್ದರು.
ಧಾರ್ಮಿಕ ಕಾರ್ಯಗಳಲ್ಲಿ, ದೇವರಿಗೆ ನೈವೇದ್ಯ ಅರ್ಪಿಸಲಾಯಿತು. ಇದಾದ ನಂತರ ಮಹಾ ಆರತಿ ಮಾಡಲಾಯಿತು. ನಂತರ ದೇವಾಲಯದ ಬಾಗಿಲುಗಳನ್ನು ಮುಚ್ಚಲಾಯಿತು. ರಾಜಭೋಗ್ ಪ್ರಕ್ರಿಯೆ ಪೂರ್ಣಗೊಂಡ ನಂತರ, ರಾಮಲಲಾ ವಿರಾಜಮಾನನಾಗಿರುವ ಗರ್ಭಗುಡಿಯ ಬಾಗಿಲು ತೆರೆಯಲಾಯಿತು.
ಪ್ರಧಾನ ಅರ್ಚಕ ಆಚಾರ್ಯ ಸತ್ಯೇಂದ್ರ ದಾಸ್ ಅವರ ನೇತೃತ್ವದಲ್ಲಿ ಮಹಾ ಆರತಿ ನೆರವೇರಿಸಲಾಯಿತು. ಮಹಾ ಆರತಿಯಲ್ಲಿ ಅಪಾರ ಸಂಖ್ಯೆಯ ಭಕ್ತರು ಭಾಗವಹಿಸಿದ್ದರು.