ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ಲೋಕಸಭಾ ಕ್ಷೇತ್ರದಿಂದ ಪ್ರತಾಪ್ ಸಿಂಹ ಎದುರು ನಟ ಡಾಲಿ ಧನಂಜಯ್ ನಿಲ್ತಾರೆ ಅನ್ನೋ ವಿಷಯದ ಬಗ್ಗೆ ಇದೇ ಮೊದಲ ಬಾರಿಗೆ ಡಾಲಿ ಮಾತನಾಡಿದ್ದಾರೆ.
ಇದೆಲ್ಲಾ ಊಹಾಪೋಹ, ಮಾಧ್ಯಮದವರೇ ನಂಗೆ ಟಿಕೆಟ್ ಕೊಡ್ಸಿದಿರಿ. ನನ್ನ ಬಳಿ ಯಾರೂ ಬಂದೂ ಇಲ್ಲ, ಈ ವಿಷಯದ ಬಗ್ಗೆ ಚರ್ಚೆ ಕೂಡ ಆಗಿಲ್ಲ ಎಂದು ವದಂತಿಗಳಿಗೆ ಬ್ರೇಕ್ ಹಾಕಿದ್ದಾರೆ.
ನಾನು ಸಿನಿ ರಂಗವನ್ನು ನನ್ನ ಜೀವನ ಅಂತ ಭಾವಿಸಿದ್ದೇನೆ. ಜನರು ನನ್ನನ್ನು ಪ್ರೀತಿಸುತ್ತಿದಾರೆ. ಯಾವ ಕ್ಷೇತ್ರಕ್ಕೆ ಹೋದರೂ ಜನರು ನನ್ನ ಬೆಂಬಲಿಸುತ್ತಾರೆ ಎನ್ನುವ ನಂಬಿಕೆ ಇದೆ. ಇಲ್ಲಿಯೇ ಇರಲು ಇಷಪಡುತ್ತೇನೆ.
ಹೌದು, ನನ್ನನ್ನು ಲಿಡ್ಕರ್ ಬ್ರಾಂಡ್‌ನ ರಾಯಭಾರಿ ಮಾಡಿದ್ದಾರೆ. ಇದರಲ್ಲಿ ಖುಷಿ ಇದೆ. ಆದರೆ ನಾನು ಸಿನಿಮಾ ಕ್ಷೇತ್ರಕ್ಕೆ ಸೀಮಿತ ಆದವನು. ಎಲ್ಲಾ ಪಕ್ಷದಲ್ಲೂ ನನಗೆ ಸ್ನೇಹಿತರು ಇದ್ದಾರೆ. ಆದರೆ ಚುನಾವಣೆಯಲ್ಲೂ ಪ್ರಚಾರಕ್ಕೆ ಹೋಗುವುದರ ಬಗ್ಗೆ ಯೋಚನೆ ಮಾಡಿಲ್ಲ ಎಂದಿದ್ದಾರೆ.