ಹೊಸದಿಗಂತ ಡಿಜಿಟಲ್ ಡೆಸ್ಕ್
ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ ಸುಳ್ಯದ ಬೆಳ್ಳಾರೆಗೆ ಕಾಲಿಟ್ಟಿದೆ.
ನಾಲ್ಕು ಮಂದಿ ಅಧಿಕಾರಿಗಳ ತಂಡ ಶನಿವಾರವೇ ಬೆಳ್ಳಾರೆಗೆ ಆಗಮಿಸಿದ್ದು, ಪ್ರವೀಣ್ ಕೊಲೆ ನಡೆದಿರುವ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದೆ. ಜೊತೆಗೆ ತನಿಖೆಗೆ ಪೂರಕ ಪ್ರಾಥಮಿಕ ಹಂತದ ಮಾಹಿತಿಗಳನ್ನು ಕಲೆ ಹಾಕುತ್ತಿದೆ. ಇದಲ್ಲದೆ ಅಧಿಕಾರಿಗಳು ಸುಳ್ಯ ಮತ್ತಿತರ ಪ್ರದೇಶಗಳಿಗೂ ತೆರಳಿದ್ದು, ಅಲ್ಲೂ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಪ್ರವೀಣ್ ಕೊಲೆ ಪ್ರಕರಣ ನ್ಯಾಯಾಲಯದಿಂದ ಅಧಿಕೃತವಾಗಿ ಇನ್ನಷ್ಟೇ ಎನ್‌ಐಎಗೆ ಹಸ್ತಾಂತರಗೊಳ್ಳಬೇಕಿದ್ದು, ಬಳಿಕ ಪೂರ್ಣ ಪ್ರಮಾಣದಲ್ಲಿ ಎನ್‌ಐಎ ತನಿಖೆಗಿಳಿಯಲಿದೆ.
ಈ ನಡುವೆ ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಕಡಬ ತಾಲೂಕಿನ ಸವಣೂರು ನಿವಾಸಿ ಝಾಕೀರ್ (29) ಹಾಗೂ ಸುಳ್ಯ ತಾಲೂಕಿನ ಬೆಳ್ಳಾರೆ ನಿವಾಸಿ ಶಫೀಕ್(27)ನನ್ನು ನ್ಯಾಯಂಗ ಬಂಧನದಿಂದ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದ್ದು, ವಿಚಾರಣೆ ಮುಂದುವರಿದಿದೆ.