ಪ್ರಯಾಗರಾಜ್​ ಮಹಾ ಕುಂಭಮೇಳ : ಐಆರ್‌ಸಿಟಿಸಿ ಕಡೆಯಿಂದ ವಿಶೇಷ ಟೆಂಟ್‌ ಸೌಲಭ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಪ್ರತಿ 12 ವರ್ಷಕ್ಕೊಮ್ಮೆ ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ ಮಹಾ ಕುಂಭಮೇಳ ನಡೆಯುತ್ತದೆ. ಜನವರಿ 10 ರಿಂದ ಫೆ.28 ಮಹಾ ಕುಂಭಮೇಳದ ಹಿನ್ನೆಲೆಯಲ್ಲಿ ಐಆರ್​​ಸಿಟಿಸಿಯು (ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋದ್ಯಮ ನಿಗಮ) ಪ್ರಯಾಗರಾಜ್​ನಲ್ಲಿ ಟೆಂಟ್ ಸಿಟಿ ನಿರ್ಮಾಣ ಮಾಡಿದೆ ಎಂದು ಐಆರ್​​ಸಿಟಿಸಿ ಟೂರಿಸಂ ಕಾರ್ಪೊರೇಷನ್ ಮೇಲ್ವಿಚಾರಕರಾದ ಹರ್ಷದೀಪ್ ಹಾಗೂ ನವೀನ್ ಅವರು ಮಾಹಿತಿ ನೀಡಿದ್ದಾರೆ.

ಮಹಾ ಕುಂಭಮೇಳವು ನಾಲ್ಕು ಪವಿತ್ರ ಸ್ಥಳಗಳಲ್ಲಿ ಪ್ರತಿ 12 ವರ್ಷಗಳಿಗೊಮ್ಮೆ ನಡೆಸುವ ಹಿಂದೂಗಳ ತೀರ್ಥಯಾತ್ರೆಯಾಗಿದೆ. ಹೀಗಾಗಿ, ಈ‌ ಬಾರಿ ಪ್ರಯಾಗ್​ರಾಜ್​ಗೆ ಲಕ್ಷಾಂತರ ಜನ ಬರುತ್ತಾರೆ. ಸಂಗಮದಲ್ಲಿ ಸ್ನಾನ ಮಾಡಿ ಪಾಪ ನಿವಾರಣೆಯಾಗಿ ಮೋಕ್ಷ ಪ್ರಾಪ್ತಿಗಾಗಿ ಪ್ರಾರ್ಥಿಸುತ್ತಾರೆ. ಅಲ್ಲಿಗೆ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಐಆರ್​​ಸಿಟಿಸಿ ಸುಸಜ್ಜಿತವಾದ ಅತ್ಯಾಧುನಿಕ ಟೆಂಟ್ ನಿರ್ಮಿಸಿ ವಸತಿ ವ್ಯವಸ್ಥೆ ಕಲ್ಪಿಸಿದೆ. ಎರಡು ವಿಧದ ಟೆಂಟ್ ವ್ಯವಸ್ಥೆ ಇದ್ದು, ಅದಕ್ಕೆ ತಕ್ಕಂತೆ ದರ ನಿಗದಿ ಪಡಿಸಲಾಗಿದೆ. ಬೆಳಗಿನ‌ ಉಪಹಾರ, ಭೋಜನವೂ ಇದರಲ್ಲಿ ಒಳಗೊಂಡಿದೆ ಎಂದು ತಿಳಿಸಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!