ದಿನಭವಿಷ್ಯ : ಹೆಚ್ಚು ಕಡಿಮೆ ಮಿಶ್ರಫ‌ಲಗಳ ದಿನ

ಮೇಷ
ಆತ್ಮೀಯ ಸಂಬಂಧದಲ್ಲಿ  ಬಿಕ್ಕಟ್ಟು, ಬಿರುಕು ಸಂಭವ. ಮಾತಿನ ಚಕಮಕಿ. ಮಾತಿನಲ್ಲಿ ಎಲ್ಲೆ ಮೀರದಿರಿ. ಸಮಾಧಾನದಿಂದ ವರ್ತಿಸಿರಿ.

ವೃಷಭ
ವ್ಯಕ್ತಿಯೊಬ್ಬರ ನಡೆನುಡಿ ನಿಮ್ಮ ಮನಶ್ಯಾಂತಿ ಹಾಳು ಮಾಡುವುದು. ಅವರ ಸಂಗದಿಂದ ದೂರ ಇರುವುದೇ ಒಳಿತು.  ವೃತ್ತಿಯಲ್ಲಿ ಏರುಪೇರು ಸಂಭವ.

ಮಿಥುನ
ಬೇಸರಗೊಳಿಸುವ  ಬೆಳವಣಿಗೆ ಇಂದು ಉಂಟಾದೀತು. ಆಪ್ತರು ನಿಮ್ಮ ಭಾವನೆಗೆ ಸ್ಪಂದಿಸುವುದಿಲ್ಲ ಎಂಬ ನೋವು. ಸಂಯಮ ಅತಿ ಮುಖ್ಯ.

ಕಟಕ
ಕಾರ್ಯಶೈಲಿಯಲ್ಲಿ ಕೆಲವು ಬದಲಾವಣೆ ಮಾಡಬೇಕಾದೀತು.   ಸಮಸ್ಯೆಗಳನ್ನೆ ಚಿಂತಿಸುತ್ತಾ ಕೂರದಿರಿ, ಪರಿಹಾರದ ಕುರಿತು ಆಲೋಚಿಸಿರಿ.

ಸಿಂಹ
ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸಿ. ನಿಮ್ಮಿಂದಾಗದು ಎಂಬ ನಿರಾಶೆ ತ್ಯಜಿಸಿ.  ಆರ್ಥಿಕ ಸಮಸ್ಯೆ ನಿವಾರಣೆ ಕಾಣುವುದು.

ಕನ್ಯಾ
ವೃತ್ತಿ ಕ್ಷೇತ್ರದಲ್ಲಿ ಶುಭಸುದ್ದಿ ಕೇಳುವಿರಿ.ಗುರಿ ಈಡೇರಿಕೆ.  ಖಾಸಗಿ ಬದುಕಲ್ಲಿ ಹೊಸ ಒತ್ತಡ ಉಂಟಾದೀತು.  ಆಪ್ತರೊಬ್ಬರು ದೂರ ಸರಿದಾರು.

ತುಲಾ
ವ್ಯವಹಾರದಲ್ಲಿ , ಹಣದ ವಿಚಾರದಲ್ಲಿ ಯಶಸ್ಸು ಸಾಧಿಸುವಿರಿ. ಗುರಿ ಸಾಧಿಸಲು ಸಫಲ. ಕೌಟುಂಬಿಕ ಬೆಂಬಲ. ಸಂಬಂಧದಲ್ಲಿ ಉತ್ತಮ ಹೊಂದಾಣಿಕೆ.

ವೃಶ್ಚಿಕ
ವೃತ್ತಿಯಲ್ಲಿ ನಿರಾಶೆ. ಉದ್ದೇಶಿಸಿದ  ಕಾರ್ಯ  ಈಡೇರದು.  ವೃಥಾ ಅಪವಾದ ಬರಬಹುದು. ಹಣದ ವ್ಯವಹಾರದಲ್ಲಿ ಎಚ್ಚರದಿಂದ ಕಾರ್ಯ ನಿರ್ವಹಿಸಿ.

ಧನು
ಎಲ್ಲರಿಂದ ಮೆಚ್ಚುಗೆ ಗಳಿಸುವ ಕಾರ್ಯ ಮಾಡುವಿರಿ. ಹಳೆಯ ಹೂಡಿಕೆಯು ಉತ್ತಮ ಫಲ ನೀಡುವುದು. ಕೌಟುಂಬಿಕ ಬಿಕ್ಕಟ್ಟು ಪರಿಹಾರವಾದೀತು.

ಮಕರ
ಮಿಶ್ರಫಲದ ದಿನ. ವೃತ್ತಿಯಲ್ಲಿ ಸಫಲತೆ. ಕಾರ್ಯದಲ್ಲಿ ಯಶಸ್ಸು. ಆದರೆ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಅಸಹಜತೆ ಕಾಡಬಹುದು. ವಿಶ್ರಾಂತಿ ಅಗತ್ಯವಾದೀತು.

ಕುಂಭ
ಯಶಸ್ವೀ ದಿನ. ನಿಮ್ಮ ಕಾರ್ಯದಲ್ಲಿ ಸಫಲತೆ ಸಿಗುವುದು. ಕುಟುಂಬ ಸದಸ್ಯರ ಜತೆ ಹೆಚ್ಚು ಕಾಲ ಕಳೆಯುವ ಅವಕಾಶ. ವೃತ್ತಿ ಒತ್ತಡ ಕಡಿಮೆ.

ಮೀನ
ಒಂದು ಸಮಸ್ಯೆ ಪರಿಹರಿಸಿದಂತೆ   ಹೊಸ ಸಮಸ್ಯೆ ಉಂಟಾಗುತ್ತದೆ. ಅದುವೇ ನಿಮ್ಮ ಉತ್ಸಾಹ ಕುಂದಿಸುವುದು. ದಿನವಿಡೀ ಒತ್ತಡದಿಂದ ಕಳೆಯಬೇಕಾದೀತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!