ಮೇಷ
ಇಂದಿನ ದಿನ ನಿಮಗೆ ಪೂರಕವಾಗಿದೆ. ಉದ್ದೇಶಿಸಿದ ಕಾರ್ಯ ಪೂರ್ಣ. ಮುಖ್ಯ ವಿಚಾರಗಳಲ್ಲಿ ನಿಮಗೆ ಅನುಕೂಲ ಬೆಳವಣಿಗೆ.
ವೃಷಭ
ನಿರಾಳತೆಯಿಂದ ದಿನ ಕಳೆಯುವ ಅವಕಾಶ. ದೈನಂದಿನ ಗೋಜಲು ಬಾಽಸುವುದಿಲ್ಲ. ಆಪ್ತರ ಸಾಹಚರ್ಯ ಖುಷಿ ಕೊಡುವುದು.
ಮಿಥುನ
ಇಂದು ನಿಮಗೆ ಸಮಸ್ಯೆ ಕಾಡಲಾರದು. ಎಲ್ಲವೂ ಸರಿ ಇದ್ದರೂ ಮನದಲ್ಲೇನೋ ಕೊರಗು. ಯಾವುದೊ ಕೊರತೆ ಉಳಿದಿದೆ ಎಂಬ ಭಾವನೆ.
ಕಟಕ
ಇಂದು ಯಾವುದೇ ಪ್ರಮುಖ ನಿರ್ಧಾರ ಕೈಗೊಳ್ಳದಿರಿ. ಏಕೆಂದರೆ ಎಲ್ಲವೂ ನಿಮಗೆ ಅನು ಕೂಲಕರವಾಗಿಲ್ಲ. ಕಾದು ನೋಡುವುದು ಉತ್ತಮ.
ಸಿಂಹ
ಏಕತಾನತೆಯ ಬದುಕು ಬೇಸರ. ಬದಲಾವಣೆಗೆ ತುಡಿಯುವಿರಿ. ಇದಕ್ಕೆ ಪರಿಹಾರ ನಿಮ್ಮಲ್ಲೇ ಇದೆ. ಹೊಸ ಯೋಜನೆ ಹಾಕಿಕೊಳ್ಳಿ.
ಕನ್ಯಾ
ಕೆಲವು ವಿಷಯ ಗಳಲ್ಲಿ ನಿಮ್ಮ ಹಸ್ತಕ್ಷೇಪ ನಿರೀಕ್ಷಿತ ಫಲ ನೀಡದು. ಅದನ್ನು ಸುಮ್ಮನೇ ಬಿಟ್ಟರೆ ಒಳಿತೆಂದು ಅನಿಸಲಿದೆ. ಎಚ್ಚರದಿಂದ ನಡಕೊಳ್ಳಿ.
ತುಲಾ
ಇಂದು ಸಾಲ ಪಡೆಯುವ ಅಥವಾ ಕೊಡುವ ಕಾರ್ಯಕ್ಕೆ ಮುಂದಾಗದಿರಿ. ಮುಂದಕ್ಕೆ ಮನಶ್ಯಾಂತಿ ಕದಡಲಿದೆ. ಕೌಟುಂಬಿಕ ಮನಸ್ತಾಪ.
ವೃಶ್ಚಿಕ
ನಿಮ್ಮ ಸಮಸ್ಯೆಯನ್ನು ಆಪ್ತರ ಜತೆ ಹಂಚಿಕೊಳ್ಳಲು ಮುಜುಗರ ಬೇಡ. ಕೆಲವೊಮ್ಮೆ ನಿರೀಕ್ಷಿಸದೆ ಪರಿಹಾರ ಸಿಗಬಹುದು. ಹಣದ ಕೊರತೆ.
ಧನು
ನಿಮ್ಮ ಭಾವನೆಗಳ ಮೇಲೆ ನಿಯಂತ್ರಣ ಸಾಽಸಿ. ಇಲ್ಲವಾದರೆ ನೋವುಣ್ಣುವ ಪ್ರಸಂಗ ಎದುರಿಸುವಿರಿ.ಸಣ್ಣ ಹಿನ್ನಡೆಗೆ ಎದೆಗುಂದದಿರಿ.
ಮಕರ
ಅತಿಯಾದ ಕೆಲಸದ ಒತ್ತಡ, ಕೆಲವರ ಅಸಹಕಾರ ನಿಮ್ಮ ಮನಶ್ಯಾಂತಿ ಹಾಳು ಮಾಡಲಿದೆ. ಆರಾಮವಾಗಿ ಇರಲು ಅವಕಾಶ ಸಿಗುವುದಿಲ್ಲ.
ಕುಂಭ
ನಿಮ್ಮ ಕಾರ್ಯವನ್ನು ಸಮರ್ಥವಾಗಿ ಮಾಡು ವಿರಿ. ಚಿಂತೆಯೊಂದು ಪರಿಹಾರವಾಗಿ ನೆಮ್ಮದಿ. ಕುಟುಂಬದ ಹಿರಿಯರ ಆರೋಗ್ಯ ಸುಧಾರಣೆ.
ಮೀನ
ಅತಿಯಾದ ಉತ್ಸಾಹ ಕೆಲಸ ಹಾಳು ಮಾಡೀತು. ಕೌಟುಂಬಿಕ ವಿಚಾರದಲ್ಲಿ ಅತೃಪ್ತಿ, ಅಸಮಾಧಾನ ಕಾಡಬಹುದು. ಸಂಯಮ ಒಳಿತು.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ