ಮೇಷ
ಇಂದು ಅಧಿಕ ಹಣ ಖರ್ಚು ಮಾಡುವಿರಿ. ಆದರೆ ಅದು ನಿಮ್ಮ ಪ್ರೀತಿಪಾತ್ರರಿಗಾಗಿ. ಅದರಿಂದ ಸಂತೋಷ, ತೃಪ್ತಿ ಪಡೆಯುವಿರಿ. ಕೌಟುಂಬಿಕ ನೆಮ್ಮದಿ.
ವೃಷಭ
ಇಂದು ನೀವು ಕೆಲಸದಲ್ಲಿ ನಿರಂತರ ತೊಡಗಿರಬೇಕಾದ ಪರಿಸ್ಥಿತಿ. ಅದರ ಜತೆಗೇ ನಿಮ್ಮ ಪ್ರೀತಿಪಾತ್ರರ ಬೇಡಿಕೆಗೂ ಗಮನ ಕೊಡಬೇಕು.
ಮಿಥುನ
ಭಾವನೆ ಮತ್ತು ತರ್ಕದ ಮಧ್ಯೆ ಹೊಯ್ದಾಟ. ಭಾವನಾತ್ಮಕ ಗೊಂದಲ. ಪ್ರೀತಿಪಾತ್ರರು ಮಾಡುವ ತಪ್ಪನ್ನೂ ಕಡೆಗಣಿಸಬೇಕಾದ ಅನಿವಾರ್ಯತೆ.
ಕಟಕ
ಆಪ್ತರೊಂದಿಗಿನ ಸಂಬಂಧ ಕೆಡಬಹುದು. ನಿಮ್ಮ ಮಾತು ಅಥವಾ ವರ್ತನೆ ಅದಕ್ಕೆ ಕಾರಣವಾಗಬಹುದು. ಅರಿವು, ಹೊಂದಾಣಿಕೆ ಅವಶ್ಯ.
ಸಿಂಹ
ಇಂದು ನಿಮ್ಮ ಗ್ರಹಗಳು ಬಲವಾಗಿವೆ. ವೃತ್ತಿಯಲ್ಲಿನ ಸಮಸ್ಯೆ ಗಳೆಲ್ಲವು ಪರಿಹಾರ ಕಾಣಲಿವೆ. ನಿಮ್ಮ ವಿರೋಧಿಗಳ ಯತ್ನಕ್ಕೆ ಸೋಲಾಗುತ್ತದೆ.
ಕನ್ಯಾ
ದೈನಂದಿನ ಕಾರ್ಯಗಳು ವ್ಯವಸ್ಥಿತವಾಗಿ ನಡೆಯುವುದಿಲ್ಲ. ಅಸ್ತವ್ಯಸ್ಥಗೊಳ್ಳುತ್ತದೆ. ಸುಸ್ಥಿತಿಗೆ ತರಲು ಕಷ್ಟಪಡುವಿರಿ. ಸಹನೆಯಿರಲಿ.
ತುಲಾ
ನಿಮಗಿಂದು ಪೂರಕ ದಿನವಲ್ಲ. ಮನೆಯಲ್ಲಿ ಶಾಂತಿಯ ವಾತಾವರಣ ಕಾಯ್ದು ಕೊಳ್ಳಲು ಹೆಣಗುವಿರಿ. ಜಗಳದಲ್ಲಿ ಮಧ್ಯಸ್ಥಿಕೆಯ ಪಾತ್ರ ವಹಿಸಬೇಕಾಗುತ್ತದೆ.
ವೃಶ್ಚಿಕ
ನಿಮ್ಮ ಕಾರ್ಯೋತ್ಸಾಹ ಹೆಚ್ಚುವ ಬೆಳವಣಿಗೆ ಸಂಭವಿಸುವುದು. ನಿಮ್ಮ ಸಾಧನೆಗೆ ತಕ್ಕ ಪುರಸ್ಕಾರ, ಮೆಚ್ಚುಗೆ. ಆಪ್ತರೊಂದಿಗೆ ಸಂತೋಷದ ಕಾಲ ಕಳೆಯುವಿರಿ.
ಧನು
ನಿಮ್ಮ ಕೆರಿಯರ್ ನಿರ್ಣಾಯಕ ಹಂತ ತಲುಪುವುದು. ಹೊಣೆಗಾರಿಕೆ ಹೆಚ್ಚಳ. ಅದಕ್ಕೆ ತಕ್ಕ ಪ್ರತಿಫಲವೂ ಹೆಚ್ಚಳವಾಗಲಿದೆ.
ಧನ ಲಾಭ.
ಮಕರ
ವೃತ್ತಿಗಿಂತ ಖಾಸಗಿ ವ್ಯವಹಾರ ಇಂದು ಮುಖ್ಯವಾಗುವುದು. ಕೆಲವು ವಿಷಯ ಆದ್ಯತೆಯಲ್ಲಿ ಇತ್ಯರ್ಥ ಪಡಿಸಬೇಕು. ಅದನ್ನು ದೀರ್ಘ ಎಳೆಯಬೇಡಿ.
ಕುಂಭ
ಇಂದು ಜಗಳ, ವಿವಾದಗಳಿಂದ ದೂರವಿರಿ. ಇತರರ ಜಗಳದಲ್ಲಿ ನೀವು ಸಿಕ್ಕಿಕೊಳ್ಳುವ ಸಂಭವ ಇರುತ್ತದೆ. ಅದಕ್ಕೆ ಅವಕಾಶ ನೀಡದಿರಿ.
ಮೀನ
ನಿಮ್ಮ ನಡೆ, ನುಡಿ, ಕಾರ್ಯನಿರ್ವಹಣೆ ಯಿಂದ ಎಲ್ಲರ ಗಮನ ಸೆಳೆಯುವಿರಿ. ಕಷ್ಟವೆಂದುಕೊಂಡ ಕೆಲಸವು ಸುಲಭದಲ್ಲಿ ಮುಗಿಯುವುದು.