ಮೇಷ
ಸಣ್ಣ ವಿಷಯಗಳಿಗೆ ತಲೆ ಕೆಡಿಸಿಕೊಳ್ಳುತ್ತಾ ಮಹತ್ವದ ವಿಚಾರ ಕಡೆಗಣಿಸುತ್ತಿದ್ದೀರಿ. ನಿಮ್ಮ ಧೋರಣೆ, ಬದಲಿಸಬೇಕಾದ ಅಗತ್ಯವಿದೆ.
ವೃಷಭ
ಮುಖ್ಯ ವಿಷಯದಲ್ಲಿ ಮಹತ್ವದ ನಿರ್ಧಾರ ತಾಳಬೇಕಾದ ಪ್ರಸಂಗ. ಆದರೆ ನೀವು ಅದಕ್ಕೆ ಸಿದ್ಧರಾಗಿದ್ದೀರಾ ನೋಡಿಕೊಳ್ಳಿ. ವಿವೇಚಿಸಿ ನಿರ್ಧಾರ ತಾಳಿ.
ಮಿಥುನ
ಯಾವುದಾದರೂ ವಿಷಯದಲ್ಲಿ ಗೊಂದಲ ಇದ್ದರೆ ಅದನ್ನು ನಿವಾರಿಸಿಕೊಂಡು ದೃಢ ನಿರ್ಧಾರ ತಾಳಲು ಸೂಕ್ತ ಸಮಯ. ಉದ್ಯೋಗದ ಒತ್ತಡ.
ಕಟಕ
ದೊಡ್ಡ ಸಮಸ್ಯೆ ಬೆನ್ನ ಮೇಲೇರಿದೆ ಎಂಬಂತೆ ವರ್ತಿಸುವಿರಿ. ಸರಿಯಾಗಿ ನೋಡಿದರೆ ಅದು ಸಮಸ್ಯೆಯೇ ಅಲ್ಲ. ನೀವೇ ಅದನ್ನು ದೊಡ್ಡದಾಗಿಸಿದ್ದೀರಿ.
ಸಿಂಹ
ಇತರರ ಸಮಸ್ಯೆಯಲ್ಲಿ ನೀವು ಸಿಲುಕುತ್ತೀರಿ. ಇದರಿಂದ ಮನಸ್ಸಿಗೆ ಅಶಾಂತಿ, ಅಸಹನೆ. ಅವರ ಸಮಸ್ಯೆ ಪರಿಹರಿಸಲು ಪ್ರಯತ್ನಿಸುವಿರಿ.
ಕನ್ಯಾ
ನಿಮ್ಮನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳಲು ಕೆಲವರ ಯತ್ನ. ನೀವು ಇದನ್ನು ನಾಜೂಕಾಗಿ ನಿಭಾಯಿಸಿ. ಅವಸರದ ನಿರ್ಧಾರ ತಾಳದಿರಿ. ಸಹನೆಯಿರಲಿ.
ತುಲಾ
ಆಮಿಷಕ್ಕೆ ಬಲಿಯಾಗಿ ತಪ್ಪು ನಿರ್ಧಾರ ತಾಳದಿರಿ. ಬೆಟ್ ಕಟ್ಟುವ ತುಡಿತ ನಿಯಂತ್ರಿಸಿ. ಮನೋನಿಗ್ರಹ ಅವಶ್ಯ. ಕೌಟುಂಬಿಕ ಬದ್ಧತೆ ಈಡೇರಿಸಿರಿ.
ವೃಶ್ಚಿಕ
ಗ್ರಹಗತಿ ನಿಮಗೆ ಪೂರಕವಾಗಿದೆ. ನಿಮ್ಮ ಕನಸು ಈಡೇರುವ ಸಂಕೇತ ತೋರುತ್ತಿದೆ. ಸ್ನೇಹವು ಪ್ರೀತಿಯಾಗಿ ಮಾರ್ಪಡಬಹುದು. ಉಲ್ಲಾಸ, ಸಮಾಧಾನ.
ಧನು
ನಿಮಗಿಂದು ಮಹತ್ವದ ದಿನ. ಕೌಟುಂಬಿಕ ವಿಚಾರಗಳಿಗೆ ಇಂದು ಪ್ರಾಮುಖ್ಯತೆ . ಯಾವುದೇ ವಿಷಯ ಕಿರಿಕಿರಿ ತಾರದಂತೆ ನೋಡಿಕೊಳ್ಳಿ.
ಮಕರ
ಅಶಾಂತ ಮನಸ್ಸು. ಕೆಲವು ವಿಷಯಗಳು ಅಸಹನೆ ಸೃಷ್ಟಿಸುತ್ತವೆ. ಅಭದ್ರತೆ ಕಾಡುವುದು. ನಿಜವಾಗಿ ನಿಮ್ಮ ಚಿಂತೆ ನಿರಾಧಾರಿತ. ನಿರಾಳವಾಗಿರಿ.
ಕುಂಭ
ಪ್ರೀತಿಪಾತ್ರರು ಹಣದ ಸಮಸ್ಯೆ ಹೊಂದಿದ್ದರೆ ಅವರ ನೆರವಿಗೆ ಧಾವಿಸುವುದು ನಿಮ್ಮ ಕರ್ತವ್ಯ. ಕೌಟುಂಬಿಕ ಕಟ್ಟುಪಾಡುಗಳನ್ನು ಪಾಲಿಸಿರಿ.
ಮೀನ
ನಿಮ್ಮ ನಡೆನುಡಿ ಇಂದು ಕೆಲವರಿಗೆ ಅಚ್ಚರಿ ತರಬಹುದು. ಯಾರ ವಿರೋಧವನ್ನೂ ಕಟ್ಟಿಕೊಳ್ಳದಂತೆ ನಾಜೂಕಾಗಿ ವ್ಯವಹರಿಸಿರಿ.