ಮೇಷ
ಕೌಟುಂಬಿಕ ವಿಷಯದಲ್ಲಿ ಜವಾಬ್ದಾರಿ ಹೆಚ್ಚಳ. ಇತರರ ಸಹಕಾರ ಬಯಸಿದರೂ ಅದು ದೊರಕದು. ಸಣ್ಣ ವಿಷಯವೂ ನಿಮ್ಮ ತಾಳ್ಮೆ ಕದಡಬಹುದು.
ವೃಷಭ
ಇತರರ ನಿರೀಕ್ಷೆ ಈಡೇರಿಸಲು ಕಷ್ಟ ಪಡುವಿರಿ. ಅವರ ಬೇಡಿಕೆ ನಿಮ್ಮ ಅಳತೆಗೆ ಮೀರುವುದು. ಚರ್ಮದ ಅಲರ್ಜಿ ಉಂಟಾದೀತು.
ಮಿಥುನ
ಸಂಬಂಧಗಳನ್ನು ಅತಿಯಾಗಿ ನಿಯಂತ್ರಿಸಲು ಹೋಗದಿರಿ. ಅದರಿಂದ ಬಿಕ್ಕಟ್ಟು ಉಲ್ಬಣ. ನೀವೂ ಹೊಂದಾಣಿಕೆ ಮಾಡಿಕೊಳ್ಳಿರಿ.
ಕಟಕ
ಏನೂ ಮಾಡಿದರೂ ಸಮಸ್ಯೆ ಮುಗಿಯುತ್ತಿಲ್ಲ ಎಂಬ ಹತಾಶ ಭಾವನೆ ನಿಮ್ಮದು. ಚಿಂತೆ ಬೇಡ, ಇನ್ನು ಸ್ವಲ್ಪ ಕಾಲದಲ್ಲೇ ನಿಮ್ಮ ಮುಖ್ಯ ಸಮಸ್ಯೆ ಪರಿಹಾರ ಕಾಣಲಿದೆ.
ಸಿಂಹ
ಪರಸ್ಪರ ವಿರುದ್ಧವಾದ ಭಾವನೆಗಳ ತಾಕಲಾಟ. ಅದರಿಂದ ದ್ವಂದ್ವ. ಹೊಣೆಗಾರಿಕೆ ಹೆಚ್ಚಳ. ಅದನ್ನೆಲ್ಲ ಸಮಾಧಾನದಿಂದ ನಿಭಾಯಿಸಿ.
ಕನ್ಯಾ
ಆತ್ಮೀಯ ಬಂಧುಗಳ ಜತೆ ವ್ಯವಹರಿಸುವಾಗ ಗೊಂದಲಕ್ಕೆ ಆಸ್ಪದ ಕೊಡದಿರಿ. ನಿಮ್ಮ ನಿಲುವು ಸ್ಪಷ್ಟವಾಗಿರಲಿ. ವಾಗ್ವಾದಗಳಿಂದ ದೂರವಿರಿ.
ತುಲಾ
ಕೆಲ ವಿಚಾರ ಮನಸ್ಸನ್ನು ಕೊರೆಯುತ್ತದೆ. ಅದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಫಲಿಸದು. ಪರಿಸ್ಥಿತಿಗೆ ಹೊಂದಿಕೊಂಡು ನಡೆಯಿರಿ.
ವೃಶ್ಚಿಕ
ಅತಿಥಿಗಳು ಅನಿರೀಕ್ಷಿತ ಭೇಟಿ ನೀಡಿಯಾರು. ಆರ್ಥಿಕ ಗುರಿ ಸಾಧಿಸಲು ಸರಿಯಾಗಿ ಗಮನ ಕೊಡಿ. ಇತರರು ನೆರವು ನೀಡುವರೆಂಬ ಭ್ರಮೆ ಬಿಟ್ಟುಬಿಡಿ.
ಧನು
ಸಾಂಸಾರಿಕ ಬದುಕಿನಲ್ಲಿ ಬಿಕ್ಕಟ್ಟು ಉಂಟಾದೀತು. ಕೆಲವರ ಮಾತುಗಳಿಗೆ ಅತಿರೇಕದ ಪ್ರತಿಕ್ರಿಯೆ ತೋರದಿರಿ. ಎಲ್ಲವನ್ನು ಕ್ರೀಡಾಸ್ಫೂರ್ತಿಯಿಂದ ಸ್ವೀಕರಿಸಿರಿ.
ಮಕರ
ಸಮಸ್ಯೆಯೊಂದು ನಿವಾರಣೆಯಾಗಿ ಮಾನಸಿಕ ನಿರಾಳತೆ ದೊರಕಲಿದೆ. ಕೆಲವರ ವರ್ತನೆಯನ್ನು ತಪ್ಪಾಗಿ ಭಾವಿಸುವ ಸಂದರ್ಭ ಒದಗಬಹುದು.
ಕುಂಭ
ನಿಮ್ಮ ವರ್ತನೆಯಲ್ಲಿ ಮಾಡುವ ಸಣ್ಣ ಬದಲಾವಣೆ ದೊಡ್ಡ ಪರಿವರ್ತನೆಗೆ ಕಾರಣವಾಗುವುದು. ಖಾಸಗಿ ಬದುಕಿನಲ್ಲಿ ಹೆಚ್ಚು ಸಂತೋಷ.
ಮೀನ
ನಿಮಗೆ ಅನಿರೀಕ್ಷಿತ ಎನ್ನಬಹುದಾದ ಬೆಳವಣಿಗೆ. ಅದನ್ನು ದೃಢತೆಯಿಂದ ಎದುರಿಸಿ. ಬಂಧುಗಳ ಅಸಹಕಾರ. ಕಾರ್ಯದಲ್ಲಿ ವಿಳಂಬ.